ನೀರುಮಾರ್ಗದ ಕೋಲ್ಚರ್ ಹಿಲ್ ಸ್ಟೇಷನ್ ನಲ್ಲಿ ಡಂಪಿಂಗ್ ಯಾರ್ಡ್ ನಿರ್ಮಾಣಕ್ಕೆ ಗ್ರಾಮಸ್ಥರ ತೀವ್ರ ವಿರೋಧ.

ಮಂಗಳೂರು:ನೀರುಮಾರ್ಗ ಕೋಲ್ಚಾರ್ ಹಿಲ್ ಸ್ಟೇಷನ್ ನಲ್ಲಿ ಅಡ್ಯಾರ್ ಪಂಚಾಯತ್ ಪ್ರಸ್ತಾವಿತ ಡಂಪಿಂಗ್ ಯಾರ್ಡ್ ಅಡ್ಯಾರ್ ಮತ್ತು ನೀರುಮಾರ್ಗ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. 

ಪ್ರಸ್ತಾವಿತ ಡಂಪಿಂಗ್ ಯಾರ್ಡ್ ಅವೈಜ್ಞಾನಿಕ ಹಾಗೂ ಎತ್ತರದ ಪ್ರದೇಶದಲ್ಲಿ ಇದ್ದು ಸುತ್ತಲೂ ತಗ್ಗು ಪ್ರದೇಶದಲ್ಲಿ ವಸತಿ ಮತ್ತು ಕೃಷಿ ಭೂಮಿ ಇದ್ದು ಈ ಯೋಜನೆಯಿಂದ ಮಳೆಗಾಲದಲ್ಲಿ ಕಸ, ಪ್ಲಾಸ್ಟಿಕ್ ತಗ್ಗು ಪ್ರದೇಶಕ್ಕೆ ಹರಿದು ಹೋಗುವ ಸಂಭವವಿದೆ. 
ಇದೇ ಪರಿಸರದಲ್ಲಿ ದೇವಸ್ಥಾನ ಮತ್ತು ನಾಗಬನಗಳಿದ್ದು ಈ ಪ್ರದೇಶದಲ್ಲಿ ಕಸ ಹಾಕುವುದರಿಂದ ಆರಾಧನಾ ಪ್ರದೇಶಗಳ ಪಾವತ್ರ್ಯತೆಗೆ ಅಪಚಾರ ಆಗುತ್ತದೆ.  ಪ್ರಾಕೃತಿಕ ಸುಂದರತೆಯಿಂದ ಕೂಡಿದ ಈ ಪ್ರದೇಶದಲ್ಲಿ ಇಂತಹ ಅವೈಜ್ಞಾನಿಕ, ಜನವಿರೋಧಿ ಯೋಜನೆಯನ್ನು ಯಾವುದೇ ಕಾರಣಕ್ಕೂ ಕಾರ್ಯರೂಪಕ್ಕೆ ತರಬಾರದೆಂದು ಅಡ್ಯಾರ್ ಮತ್ತು ನೀರುಮಾರ್ಗ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಗ್ರಾಮಸ್ಥರ ವಿರೋಧದ ನಡುವೆ ಡಂಪಿಂಗ್ ಯಾರ್ಡ್ ನಿರ್ಮಿಸಲು ತೊಡಗಿರುವ ಗ್ರಾಮ ಪಂಚಾಯತ್ ಈಗ ಯಾವ ಕ್ರಮ ಕೈಗೊಳ್ಳುವುದು ಎಂಬುದನ್ನು ಕಾದು ನೋಡಬೇಕಾಗಿದೆ.

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.