ಉಡುಪಿ: ಮಲ್ಪೆ ಬೀಚ್ ನಲ್ಲಿ ಉದ್ಘಾಟನೆಯಾದ ಮೂರೇ ದಿನಕ್ಕೆ ಫ್ಲೋಟಿಂಗ್ ಬ್ರಿಡ್ಜ್ ಅಲೆಗಳ ಹೊಡೆತಕ್ಕೆ ಸಮುದ್ರ ಪಾಲಾಗಿದೆ.

ಶಾಸಕ ರಘುಪತಿ ಭಟ್ ಶುಕ್ರವಾರ ಉಡುಪಿಯ ಮಲ್ಪೆ ಬೀಚ್ನ ಫ್ಲೋಟಿಂಗ್ ಬ್ರಿಡ್ಜ್ ಅನ್ನು ಉದ್ಘಾಟನೆ ಮಾಡಿದ್ದರು. ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಮಲ್ಪೆ ಬೀಚ್ನಲ್ಲಿ ಸ್ಥಾಪಿಸಲಾಗಿರುವ ಕರ್ನಾಟಕ ರಾಜ್ಯದ ಪ್ರಪ್ರಥಮ ತೇಲುವ ಸೇತುವೆ ಸಮುದ್ರ ಪಾಲಾಗಿದೆ. ಕೇರಳ ಬಿಟ್ಟರೆ ರಾಜ್ಯದ ಮಲ್ಪೆಯಲ್ಲಿ ಮಾತ್ರ ಫ್ಲೋಟಿಂಗ್ ಬ್ರಿಡ್ಜ್ ನಿರ್ಮಾಣವಾಗಿತ್ತು. ಸೇತುವೆಗೆ ಅಳವಡಿಸಲಾದ ತೇಲುವ ಇಂಟರ್ ಲಾಕಿಂಗ್ ಪ್ಲೇಟ್ ಗಳು ಕಳಚಿಕೊಂಡಿದ್ದು, ಫೌಂಟೌನ್ಸ್ ಬ್ಲಾಕ್ ಅಲೆಗಳ ಹೊಡೆತಕ್ಕೆ ಸಿಲುಕಿ ದಡ ಸೇರಿವೆ.

ಸುಮಾರು 80 ಲಕ್ಷ ರೂ. ವೆಚ್ಚದ ವಿದೇಶಿ ತಂತ್ರಜ್ಞಾನದಲ್ಲಿ ತಯಾರಿಸಿದ ಸೇತುವೆ ಮುರಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಫ್ಲೋಟಿಂಗ್ ಬ್ರಿಡ್ಜ್ ಮೇಲೆ ಹೋಗಲು ಪ್ರವಾಸಿಗರಿಗೆ ಪ್ರತಿ 15 ನಿಮಿಷಕ್ಕೆ 100 ರೂಪಾಯಿ ಟಿಕೆಟ್ ಫಿಕ್ಸ್ ಮಾಡಲಾಗಿತ್ತು.
ಕಳಪೆ ಕಾಮಗಾರಿ ಯಿಂದಾಗಿ ಮುರಿದು ಬಿತ್ತಾ ಫ್ಲೋಟಿಂಗ್ ಬ್ರಿಡ್ಜ್..!? . ಕೇರಳದ ಬೇಪೂರ್ನಲ್ಲಿ ಮಾತ್ರ ಇಂತಾ ಫ್ಲೋಟಿಂಗ್ ಸೇತುವೆ ಇದೆ.
- ನ್ಯೂಸ್ ಬ್ಯೂರೋ true news ಕನ್ನಡ