ಮುಲ್ಕಿ ಜನರೇ ಎಚ್ಚರ.‌‌. ಎಚ್ಚರ..!! ಕೊರೋನ ಹರಡುವ ಬೀತಿ ಸೃಷ್ಟಿಸಿದ ಕಂಪೆನಿ ಇದೇ.‌‌‌‌.‌!?

ramky company mulki

ಮುಲ್ಕಿ: ಮುಲ್ಕಿಯ ಗ್ರಾಮದ ಜನರಲ್ಲಿ ಟೆಂಕ್ಷನ್ ಹೆಚ್ಚು ಆಗುವಂತೆ ಮಾಡುತ್ತಿದೆ ಈ ಕಂಪನಿ.  ವಿರೋಧಗಳ ನಡುವೆಯೂ ಕೆ. ಎಸ್ ರಾವ್ ನಗರದ ಹತ್ತಿರದಲ್ಲಿ ಇಂಡಸ್ಟ್ರಿಯಲ್ ಏರಿಯಾದಲ್ಲಿ ತಲೆಎತ್ತಿತು ಈ ಕಂಪೆನಿ. ಅದುವೇ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಆಸ್ಪತ್ರೆಗಳ ವೇಸ್ಟ್ ಗಳನ್ನು ತಂದು ಬರ್ನ್ ಮಾಡುವ ರಾಂಮ್ಕೀ ಎನ್ನುವ ಈ ಕಂಪೆನಿ. ಇದು ಜನರ ಜೀವನದಲ್ಲಿ ಚೆಲ್ಲಾಟ ಆಡುತ್ತಿದ್ದೆ ಮಾತ್ರವಲ್ಲದೇ ತನ್ನ ಕೆಲಸಗಾರರಿಗೂ ಯಾವುದೇ ರಕ್ಷಣೆ ಬಗ್ಗೆ ಕನಿಷ್ಟ ಮಾನವೀಯತೆ ಇಲ್ಲದೆ ಇರುವ ರಾಂಮ್ಕೀ  ಕಂಪೆನಿ ಹಣ ಮಾಡುವುದು ಒಂದೇ ನಮ್ಮ ಗುರಿ ಎಂದು ಕೊಂಡಂತೆ ಕಾಣುತ್ತದೆ. 

j

ನೀವು ಆಲೋಚನೆ ಮಾಡದ ಎಷ್ಟೋ ಭಯಂಕರ ಸಂಗತಿಗಳ ಬಗ್ಗೆ ಇಲ್ಲವೇ ನೋಡಿ ಕಂಪ್ಲೀಟ್ ಪಕ್ಕ ಮಾಹಿತಿ. ಇದು ರಾಂಮ್ಕೀ ಎನ್ನುವ ಹೆಸರಿನ ಕಂಪೆನಿಯ ಹಣ ಮಾಡುವ ಅನ್ಯ ಮಾರ್ಗ. ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಸ್ಪತ್ರೆಗಳು ಗಣನೀಯ ಸಂಖ್ಯೆಯಲ್ಲಿ ಇದೆ ಅದು ನಿಮಗೂ ಗೊತ್ತಿರುವ ಮಾಹಿತಿ ಆದರೆ ಈ ಆಸ್ಪತ್ರೆಗಳೇ ಈ ರಾಂಮ್ಕೀ ಕಂಪೆನಿಯ ಟಾರ್ಗೆಟ್. ಈ ಆಸ್ಪತ್ರೆ ಗಳಲ್ಲಿನ ವೇಸ್ಟ್‌ಗಳನ್ನು ಸರ್ಮಪಕ ರೀತಿಯಲ್ಲಿ ಇಲೆವರಿ ಮಾಡುವ ಉದ್ದೇಶದಿಂದ ಆಸ್ಪತ್ರೆ ವೇಸ್ಟ್ ಗಳನ್ನು ರಾಂಮ್ಕೀ ಕಂಪೆನಿ ಪಡೆಯುತ್ತದೆ. ಹೀಗೆ ಪಡೆದಂತಹ ಎಲ್ಲಾ ವೆಸ್ಟ್  ಸಂಗ್ರಹಿಸಿ ನಂತರ  ತಲುಪುವುದು ಕೆ. ಎಸ್‌. ರಾವ್ ನಗರದಲ್ಲಿ ಇರುವ ರಾಂಮ್ಕೀ  ಕಂಪೆನಿಗೆ. ಈ ಎಲ್ಲಾ ಅಪಾಯಕಾರಿ ವೇಸ್ಟ್ ಗಳನ್ನು ಈ ಕಂಪನಿಯಲ್ಲಿ ಬರ್ನ್ ಮಾಡಬೇಕು ಅದ್ರೆ ಇಲ್ಲಿ ನಡೆಯುತ್ತಿರುವುದೇ ಬೇರೆ. 

ha

ಆಸ್ಪತ್ರೆಯ ತ್ಯಾಜ್ಯ ವಸ್ತುಗಳನ್ನು ಇಲ್ಲಿ ಸುಮಾರು 20ಕ್ಕೂ ಅಧಿಕ ಕೆಲಸಗಾರರು ವಿಂಗಡಿಸುತ್ತಾರೆ. ಅಂದರೆ ಸಿರಿಂಜಿ,ಡ್ರಿಪ್ಸ್ ಬಾಟಲ್, ಮನುಷ್ಯನ ದೇಹದ ಸರ್ಜರಿ ಮಾಡಿದ ಬಾಗಗಳು,ಇಂತಹ ಹಲವು ವಿವಿಧ ವಸ್ತುಗಳು ಬರುತ್ತದೆ ಆದರೆ ಇದೀಗಿನ ದಿನಗಳಲ್ಲಿ ಕೊರೋನ ಕ್ಕೆ ಸಂಬಂಧಿಸಿದ ಪಿಪಿ ಕಿಟ್, ಮಾಸ್ಕ್, ರೋಗಿಗಳಿಗೆ ಬಳಸಿದ ‌ಡೈಪರ್ ಕೂಡ ಆಸ್ಪತ್ರೆಯಿಂದ ಇಲ್ಲಿಗೆ ಬರುತ್ತದೆ. ಇದರಲ್ಲಿ ಯಾವುದೇ ವಸ್ತು ಕೂಡ ಮರುಬಳಕೆಗೆ ಯೋಗ್ಯವಾದ ವಸ್ತು ಅಲ್ಲ ಆದ್ದರಿಂದ ಇಂತಹ ವಸ್ತುಗಳನ್ನು ರಾಂಮ್ಕೀ ಗೆ ನೀಡುವುದು ಸುಡುವುದಕ್ಕೆ ಆದರೆ ಈ ಕಂಪೆನಿ ಮಾಡುತಿರುವುದೇ ಬೇರೆ. ಇದರಲ್ಲಿ ಹಣ ಮಾಡುವ ಕೆಲಸ ಮಾಡುತ್ತದೆ ಅಂದಹಾಗೆ ಇದರಲ್ಲಿ ಕೆಲವು ವಸ್ತುಗಳನ್ನು ಬೇರ್ಪಡಿಸಿ ಇಲ್ಲಿಯ ಕೆ. ಎಸ್ ರಾವ್ ನಗರದಲ್ಲಿ ಇರುವ ಗುಜಿರಿ ಅಂಗಡಿಗೆ ಮಾರುತ್ತಿದೆ. ಅಷ್ಟೇ ಯಾಕೆ ಇಲ್ಲಿ ಇದೀಗ ಕೊರೋನ ಕಾಲದಲ್ಲಿ ಬಳಸುವ ಪಿಪಿ ಕಿಟ್ ಕೂಡ ಸೇರಿಸಿ ಗುಜಿರಿ ಅಂಗಡಿಗೆ ಮಾರುತ್ತಾರೆ. ಪಿಪಿ ಕಿಟ್ ಅನ್ನು ಗುಜಿರಿಗೆ ಮಾರುವುದು ರಿಂದ ಜನ ಸಾಮಾನ್ಯರಿಗೆ ಕೊರೋನ ದಂತಹ ರೋಗ ಹರಡದೇ ಇರುತ್ತಾ..? ಇದು ಜನರ ಜೀವನದಲ್ಲಿ ಚೆಲ್ಲಟಾ ಆಡುವುದು ಅಲ್ಲವೇ ‌..? ಲಾಕ್ ಡೌನ್ ಮಾಡಿದರು ಎನ್ ಪ್ರಯೋಜನ..? ಇಂತಹ ಆರೋಪ ಇಲ್ಲಿನ ಕೆಲಸ ಗಾರರು ಹಾಗೂ ಹೋರಾಟಗಾರರು ಮಾಡುತ್ತಿದ್ದಾರೆ. 

hk

ಈ ರಾಂಮ್ಕೀ ಎಂಬ ಹೆಸರಿನ ಸಂಸ್ಥೆ ಗೆ ಮುಲ್ಕಿ ನಗರ ಪಂಚಾಯತ್ ಯಾವಾಗ  ಕ್ರಮ ಕೈಗೊಳ್ಳುತ್ತೆ ? ಕೊರೋನಾ ಎಂಬ ವೈರಸ್‌ ದೇಶ,ರಾಜ್ಯ ವನ್ನು ಗಂಭೀರವಾಗಿ ಕಾಡುತ್ತಿದೆ‌. ಹಣದ ಆಸೆಗೆ ಜನರ ಜೀವನದ ಜೊತೆ ರಾಂಮ್ಕೀ ಎನ್ನುವ ಸಂಸ್ಥೆಗೆ ಕಡಿವಾಣ ಹಾಕುವುದು ಅಗತ್ಯ. ಇಲ್ಲವೇ ಮುಲ್ಕಿ ಕೊರೋನದ ಕೇಂದ್ರವಾಗಿ ರೂಪುಗೊಳ್ಳಬಹುದು ಎಚ್ಚರ ಎಚ್ಚರ ಇನ್ನಾದರು ಎಚ್ಚೆತ್ತುಕೊಳ್ಳಿ. ಇಲ್ಲವೇ ಮಹಾ ದುರಂತಕ್ಕೆ ಕಾರಣವಾಗಬಹುದು.

ವರದಿ : ಹರೀಶ್ ಮುಲ್ಕಿ

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.