ಮನಸ್ಸಿಗೆ ತೃಪ್ತಿ ನೀಡುವ ಸೃಜನಾತ್ಮಕ ಗೋಡೆಗಳು

ತಮ್ಮ ಮನೆ ಸುಂದರವಾಗಿಕಾಣಬೇಕು ಎಂಬುದು ಎಲ್ಲರ ಬಯಕೆಯಾಗಿರುತ್ತದೆ. ಮನೆಯ ಒಳಾಂಗಣವನ್ನು ಪೀಠೋಪಕರಣ, ಕಿಟಕಿ ಪರದೆಗಳು, ಟೀವಿ, ಸ್ಟಾಂಡ್, ಅಲಂಕಾರಿಕ ವಸ್ತುಗಳಿಂದ ಮನೆಯನ್ನು ಸಿಂಗರಿಸುತ್ತಾರೆ. ಹೀಗೆಲ್ಲಾ ಸಿಂಗರಿಸಿ ಗೋಡೆ ಮಾತ್ರ ಖಾಲಿ ಬಿಟ್ಟರೆ ಹೇಗೆ..?ಈ ಎಲ್ಲಾ ಅಲಂಕಾರಿಕ ವಸ್ತುಗಳ ಜೊತೆಗೇ ಗೋಡೆಗಳು ಕೊಂಚ ಕಲಾತ್ಮಕವಾಗಿರುವುದೂ ಮುಖ್ಯ.

wall decoration


ಹಿಂದಿನ ಕಾಲದ ಮನೆಗಳಲ್ಲಿ ಗೋಡೆಗಳ ಅಗಲಕ್ಕೂ ದೇವರ ಫೋಟೊಗಳು ಮತ್ತು ಕ್ಯಾಲಂಡರ್‌ಗಳನ್ನು ತೂಗು ಹಾಕುತ್ತಿದ್ದರು. ಈಗಿನ ಮನೆಗಳಲ್ಲಿ ದೇವರಕೋಣೆ ಪ್ರತ್ಯೇಕವಾಗಿರುತ್ತದೆ. ಹೀಗಾಗಿ ಮನೆಯ ಎಲ್ಲಾ ಗೋಡೆಗಳ ಮೇಲೆ ದೇವರ ಫೋಟೊಗಳನ್ನು ಹಾಕುವ ಅಗತ್ಯವಿಲ್ಲ.

wall decoration

ಈಗಿನ ಕಾಲದ ಮನೆಯ ಗೋಡೆಗಳಿಗೆ ಕೊಂಚ ಕ್ರೀಯಾತ್ಮಲವಾಗಿ ಆಲೋಚಿಸಿ ಸರಳವಾದ ವಸ್ತು ಅಥವಾ ಕಲೆಯನ್ನು ಸೇರಿಸಿದರೆ ಆ ಕೋಣೆಯ ಅಂದ ಇನ್ನಷ್ಟು ಹೆಚ್ಚುತ್ತದೆ. ಹೊರಗಿನಿಂದ ಮನೆಗೆ ಆಗಮಿಸಿದ ಬಳಿಕ ಮನಸಿಗೆ ಸಿಗುವ ಸಂತೋಷ ಮತ್ತು ತೃಪ್ತಿಗೆ ಸೃಜನಾತ್ಮಕ ಗೋಡೆಗಳು ಇನ್ನಷ್ಟು ಮುದಗೊಳ್ಳುತ್ತದೆ. 

wall decoration

ನಿಮ್ಮ ಸವಿ ನೆನಪುಗಳನ್ನು ದಾಖಲಿಸಿ
ನಿಮ್ಮಜೀವನ ಸುಂದರ ನೆನಪುಗಳನ್ನು ಚಿತ್ರಪಟಗಳನ್ನು ಪ್ರಖರ ಬಣ್ಣದ ಅಂಚಿನ ಚೌಕಟ್ಟಿನಲ್ಲಿರಿಸಿ ಕಲಾತ್ಮಕವಾಗಿ ಗೋಡೆಗಳನ್ನು ಅಲಂಕರಿಸಿ. ಒಂದರ ಪಕ್ಕ ಇನ್ನೊಂದು ಸಲಾಗಿ ಫೋಟೊ ಫ್ರೇಮ್‌ಗಳನ್ನು ಜೋಡಿಸುವ ಕಾಲ ಸರಿದು ಹೋಗಿದೆ.

wall decoration

ಈಗ ಪಕ್ಕದ ಚೌಕಟ್ಟು ಕೊಂಚವೇ ಕೆಳಗೆ ಬರುವಂತೆ, ಅದರ ನಂತರರದ್ದು ಇನ್ನೂ ಕೊಂಚ ಕೆಳಗೆ ಬರುವಂತೆ ಜೋಡಿಸಿ. ಚಿಕ್ಕ ಚಿತ್ರದಿಂದ ದೊಡ್ಡಗಾತ್ರದವರೆಗೆ ಮೆಟ್ಟಲಿನಾಕಾರದಲ್ಲಿ ಜೋಡಿಸುವುದು ಕಲಾತ್ಮಕತೆಯ ಸಂಕೇತವಾಗಿದೆ.

wall decoration

ಪೈಟಿಂಗ್ ಮಾಡಿ
ಬಿಳಿ ಬಣ್ಣದ ಮೇಲೆ ನಿಮಗೆ ಇಷ್ಟವಾದ ಬಣ್ಣವನ್ನು ಸುಂದರವಾಗಿ ಬಿಡಿಸಿ. ವಿವಿದ ಬಣ್ಣಗಳನ್ನು ಬಳಸಿ ಕಲೆಗೊಂದು ರೂಪ ನೀಡಿ. ಒಂದು ವೇಳೆ ನಿಮ್ಮಲ್ಲಿ ಆ ಕಲಾವಿದನಿಲ್ಲದಿದ್ದಲ್ಲಿ...ಒಂದೇ ಬಣ್ಣದ ವೃತ್ತಾಕಾರ, ಚೌಕಾಕಾರಗಳನ್ನು ಬಿಡಿಸಿ.

wall decoration

ಪ್ರತಿ ಆಕೃತಿಗೂ ಪ್ರಖರವಾದ ಬೇರೆ ಬೇರೆ ಬಣ್ಣಗಳನ್ನು ಬಳಸುವ ಮೂಲಕ ವೈವಿಧ್ಯತೆಯನ್ನು ಪಡೆಯಬಹುದು. ಈಗ ಗೋಡೆಗೆ ಹಚ್ಚುವ ಸಿದ್ಧರೂಪದ ಅಲಂಕಾರದ ಚಿತ್ರಗಳು ಸಿಗುತ್ತವೆ. ಸೂಕ್ತವಾದವುಗಳನ್ನು ಖರೀದಿಸಿ ಮನೆಯ ಅಂದವನ್ನು ಹೆಚ್ಚಿಸಬಹುದು.

wall decoration

ಗೋಡೆಯಲ್ಲಿ ಗಾಢ ಬಣ್ಣದ ಪರದೆ ಮತ್ತು ರತ್ನಗಂಬಳಿ ಬಳಸಿ
ಗಾಢ ಬಣ್ಣದ ಕಿಟಕಿ ಮತ್ತು ಬಾಗಿಲ ಪರದೇಗಳೇ ಸೂಕ್ತ. ನೆಲಕ್ಕೆ ನೇರಳೆ, ಕಾಫಿ ಅಥವಾ ಕಂದು ಬಣ್ಣದ ರತ್ನಕಂಬಳಿ ಸೂಕ್ತವಾದರೆ, ಇದೇ ಬಣ್ಣದ ಕಿಟಕಿ ಪರದೆಗೂ ಉತ್ತಮವಾದ ಮೆರಗು ನೀಡುತ್ತದೆ. ಆದರೆ ಪೀಠೋಪಕರಣಗಳು ಮತ್ತು ಮೇಜಿನ ಮೇಲಿನ ಬಟ್ಟೆ ಬಿಳಿ ಬಣ್ಣದ್ದಾಗಿರಲಿ. ಇದು ಹಿಂಭಾಗದ ಗಾಢವರ್ಣದ ಪರದೆ  ಹಿಂಭಾಗದಲ್ಲಿ ಎದ್ದುಕಾಣುತ್ತದೆ.

wall decoration

ಪುಸ್ತಕದ ಕಪಾಟೊಂದು ಇರಲಿ
ಪುಸಕ್ತಕಗಳನ್ನು ಸುಂದರವಾಗಿ ಜೋಡಿಸಲು ಪುಸಕ್ತಕದ ಕಪಾಟೊಂದನ್ನು ಗೋಡೆಯ ಮಧ್ಯೆ ಇರಿಸಿ. ಒಂದೊ...ದೊಡ್ಡ ಅಥವಾ ಗೋಡೆಗೇ ಅಳವಡಿಸಬಲ್ಲ ಚಿಕ್ಕಚಿಕ್ಕ ಮೂರು ಅಥವಾ ನಾಲ್ಕು ಕಪಾಟುಗಳನ್ನೂ ಮಾಡಿ. ಆದರೆ ಇವು ಗಾಢವರ್ಣದಲ್ಲಿದ್ದು ಬಿಳಿ ಬಣ್ಣದ ಹಿನ್ನಲೆಯಲ್ಲಿ ಕಾಣುವಂತಿರಬೇಕು.

wall decoration

ಈ ಪುಸ್ತಕ ಕಪಾಟನ್ನು ನಿಮ್ಮ ಅಭಿರುಚಿಗೆ ತಕ್ಕಂತೆ ವಿಭಿನ್ನವಾದ ಆಕಾರದಲ್ಲಿ ನಿರ್ಮಿಸಬಹುದು. ಕೇವಲ ಪುಸ್ತಕಗಳನ್ನು ಮಾತ್ರ ಇಡದೇ ಅಲಂಕಾರಿ ವಸ್ತುಗಳನ್ನಿಡಲು ಸಾಧ್ಯವಾಗುವಂತಹ ಕಪಾಟನ್ನು ಮಾಡಿ ಇದು ಇನ್ನಷ್ಟು ಸುಂದರವಾಗಿ ಕಾಣುತ್ತದೆ.

wall decoration

ಅಲಂಕಾರಿಕ ವಸ್ತುಗಳನ್ನು ಇರಿಸಿ
ಬಿಳಿ ಬಣ್ಣದಗೋಡೆಯ ಹಿನ್ನಲೆಯಲ್ಲಿ ಎದ್ದು ಕಾಣುವಂತಿರುವ ಕಲಾತ್ಮಕ ಮತ್ತು ಅಲಂಕಾರಿಕಾ ವಸ್ತುಗಳನ್ನು ಸ್ಥಾಪಿಸಿ ಮನೆಯ ಸುಂದರತೆಯನ್ನು ಹೆಚ್ಚಿಸಿ. ಒಂದು ವೇಳೆ ನಿಮ್ಮ ಮಸೆಯ ಸೋಫಾ ಸೆಟ್ ಬಿಳಿ ಬಣ್ಣದಲ್ಲಿದ್ದರೆ ಅದರಲ್ಲಿರುವ ದಿಂಬುಗಳು ಗಾಢವರ್ಣದಲ್ಲಿರಲಿ. ಇದರ ಮೇಲೆ ಸಾಕಷ್ಟು ಬೆಳಕು ಬೀಳುವಂತಿತಬೇಕು. ಇಲ್ಲದಿದ್ದರೆ ಒಂದು ಹೆಚ್ಚುವರಿ ಬಲ್ಬ್ ಅಥವಾ ಟ್ಯೂಬ್ ಲೈಟ್‌ಗಳನ್ನು ಹಾಕಿ ಬೆಳಕು ಸಾಕಷ್ಟಿರುವಂತೆ ನೋಡಿಕೊಳ್ಳಿ.

wall decoration
  • ಸುಲಭಾ.ಆರ್.ಭಟ್
  • ಫ್ಯಾಷನ್ ಬ್ಯೂರೋ, ಟ್ರೂನ್ಯೂಸ್ ಕನ್ನಡ
     

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.