ಕೊನೆಯುಸಿರೆಳೆದ ಕರ್ನಾಟಕದ ಪ್ರಖ್ಯಾತ ಗಾಯಕಿ ಶ್ಯಾಮಲ ಜಿ ಭಾವೆ!

Shyamala g Bhave is a famous singer of Karnataka

ಬೆಂಗಳೂರು: ಕರ್ನಾಟಕ ಮತ್ತು ಹಿಂದೂಸ್ಥಾನಿ ಸಂಗೀತ ಎರಡೂ ಪ್ರಕಾರಗಳಲ್ಲಿ ವಿದ್ವತ್ತು ಸಾಧಿಸಿ ಹಾಡುತ್ತಿದ್ದ ಕರ್ನಾಟಕದ ಪ್ರಖ್ಯಾತ ಗಾಯಕಿ ಶ್ಯಾಮಲ ಜಿ ಭಾವೆ ಇಂದು ಬೆಳಗ್ಗೆ 6:30ಕ್ಕೆ ಕೊನೆಯುಸಿರೆಳೆದಿದ್ದಾರೆ. ಎರಡೂ ಪ್ರಕಾರದ ಸಂಗೀತವನ್ನು ಕರಗತ ಮಾಡಿಕೊಂಡು ಅತ್ಯುನ್ನತ ಸಾಧನೆಯನ್ನು ಮಾಡಿದ ಕೆಲವೇ ಕೆಲವು ಕಲಾವಿದರಲ್ಲಿ ಅವರು ಒಬ್ಬರಾಗಿದ್ದರು. ಅವರಿಗೆ 79 ವರ್ಷವಾಗಿತ್ತು.

1

 

ಶೇಷಾದ್ರಿಪುರಂ “ಸರಸ್ವತಿ ಸಂಗೀತ ವಿದ್ಯಾಲಯ” ಸ್ಥಾಪಿಸಿ ಸಂಗೀತ ಪಾಠಕ್ಕೆ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದವರು ಭಾವೆ. ತಮ್ಮ 16ನೆ ವಯಸ್ಸಿನಿಂದಲೇ ಸಂಗೀತ ಕಾರ್ಯಕ್ರಮ ನೀಡುತ್ತಿದ್ದ ಭಾವೆ ಅವರು ದೇಶ ಮತ್ತು ವಿದೇಶಗಳಲ್ಲಿ ಹಲವಾರು ಸಂಗೀತ ಕಚೇರಿಗಳನ್ನು ನಡೆಸಿಕೊಟ್ಟು ಶ್ರೋತೃಗಳನ್ನು ರಂಜಿಸಿದ್ದಾರೆ. ಶ್ಯಾಮಲ ಜಿ ಭಾವೆ ನಿಧನಕ್ಕೆ ನಾಡಿನ ಗಣ್ಯರು, ರಾಜಕೀಯ ಮುಖಂಡರು ಸಂತಾಪ ಸೂಚಿಸಿದ್ದಾರೆ. ಕರ್ನಾಟಕದ ಉಪಮುಖ್ಯಮಂತ್ರಿ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.

  • ನ್ಯೂಸ್ ಬ್ಯೂರೋ ಟ್ರೂ ನ್ಯೂಸ್ ಕನ್ನಡ

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.