ಕೃಷಿಯನ್ನು ಪ್ರೋತ್ಸಾಹಿಸಲು ಗದ್ದೆಗಿಳಿದ ಮಾಜಿ ಮಂತ್ರಿ ರಮಾನಾಥ ರೈ.

ಬಂಟ್ವಾಳ: ಕೃಷಿ ಮರೆಯಾಗುತ್ತಿರುವ ಈ ಸಂದರ್ಭದಲ್ಲಿ ಕೃಷಿಯನ್ನು ಪ್ರೋತ್ಸಾಹಿಸುವುವ ದೃಷ್ಟಿಯಿಂದ ಆಲತ್ತೂರು ಲೋಕೇಶ್ ಸುವರ್ಣ ರವರ ಗದ್ದೆಯಲ್ಲಿ ನಾಟಿಗೆ ಅಧಿಕೃತವಾಗಿ ಚಾಲನೆ ನೀಡಲಾಯಿತು. ಅಧಿಕೃತ ಚಾಲನೆ ವಿಶೇಷ ಕಾರ್ಯಕ್ರಮವಾಗಿ ಜನರ ಗಮನ ಸೆಳೆಯಿತು.

true w

ಮಾಜಿ ಸಚಿವ ರಮನಾಥ ರೈ ಗದ್ದೆ ಗೆ ಇಳಿದು ನಾಟಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು ರಮಾನಾಥ ರೈಯವರಿಗೆ ಸಾಥ್ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಕೃಷಿ ಸಂಸ್ಕೃತಿ ನಮ್ಮಿಂದ ಮರೆಯಾಗುತ್ತಿದೆ. ಅದನ್ನು ಭವಿಷ್ಯದ ಜನಾಂಗಕ್ಕೆ ಉಳಿಸುವ ಬಹುದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ ಎಂದು ನುಡಿದರು. ಸರ್ಕಾರ ಕೃಷಿಕರಿಗೆ ಹೆಚ್ಚಿನ ಸೌಲಭ್ಯ ಒದಗಿಸಬೇಕು. ಗದ್ದೆ ಕೃಷಿ ಮಾಡುವ ಕೃಷಿಕರಿಗೆ ಸರಕಾರ ಆರ್ಥಿಕ ಬೆಂಬಲ ನೀಡಬೇಕು ಎಂದು ನುಡಿದರು.

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.