ಕೃಷಿ ಸಂಜೀವಿನಿಯ 20 ಸಂಚಾರಿ ವಾಹನಗಳಿಗೆ ಸಿಎಂ ಹಸಿರು ನಿಶಾನೆ 

ಕೊಪ್ಪಳ: ನೇರವಾಗಿ ರೈತರ ಜಮೀನಿಗೆ ತೆರಳಿ ಸಸ್ಯ, ಬೆಳೆ ಹಾಗೂ ಮಣ್ಣು ಪರೀಕ್ಷೆಯ ಸೌಲಭ್ಯ ನೀಡಲಿರುವ ಕೃಷಿ ಸಂಜೀವಿನಿಯ 20 ಸಂಚಾರಿ ವಾಹನಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಸಿರು ನಿಶಾನೆ ತೋರಿಸಿದರು.

krishi sanjeevini


ಜಿಲ್ಲೆಯ ಭಾನಾಪುರ ಬಳಿ ಏಕಸ್ ಸಂಸ್ಥೆಯ ಆಟಿಕೆ ವಸ್ತುಗಳ ತಯಾರಿಕಾ ಘಟಕದ ಭೂಮಿ ಪೂಜೆಗೂ ಮುನ್ನ ಕೃಷಿ ಸಂಜೀವಿನಿ ಸಂಚಾರಿ ವಾಹನಗಳಿಗೆ ಚಾಲನೆ ನೀಡಿದರು. ಅಲ್ಲದೇ, ಜಿಲ್ಲೆಯ ಒಟ್ಟು 1.5 ಲಕ್ಷ ರೈತರಿಗೆ ಸ್ವಾಭಿಮಾನಿ ರೈತ ಕಾರ್ಡ್ ವಿತರಣೆಯಾಗಲಿದೆ. ಸಾಂಕೇತಿಕವಾಗಿ ರೈತರಿಗೆ ಸ್ವಾಭಿಮಾನಿ ರೈತ ಕಾರ್ಡ್ ವಿತರಿಸಿದರು.

swabhimani card


ಈ ವೇಳೆ, ಮಾತನಾಡಿದ ಕೃಷಿ ಸಚಿವ ಬಿಸಿ ಪಾಟೀಲ್, ರಾಜ್ಯದಲ್ಲೇ ಮೊದಲು ಕೊಪ್ಪಳ ಜಿಲ್ಲೆಗೆ ರೈತ ಸಂಜೀವಿನಿ ವಾಹನಗಳು ಬಂದಿವೆ. ರೈತರಿಗೆ ಅನುಕೂಲವಾಗಲಿವೆ ಎಂದು ಭರವಸೆ ವ್ಯಕ್ತಪಡಿಸಿದರು. 

krishi sanjeevini
  • ನ್ಯೂಸ್ ಬ್ಯೂರೋ, ಟ್ರೂನ್ಯೂಸ್ ಕನ್ನಡ

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.