ಕರ್ನಾಟಕ ಕಲಾಶ್ರೀ  ಪ್ರಶಸ್ತಿ ಗೆದ್ದ ಆರ್.ಪಿ. ಅಸುಂಡಿ ಹಾಗೂ ರಮಾ ಅರವಿಂದ

muc

ಬೆಂಗಳೂರು: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು 2020-21ನೇ ಸಾಲಿನ ಕರ್ನಾಟಕ ಕಲಾಶ್ರೀ  ಪ್ರಶಸ್ತಿಯನ್ನು ಗುರುವಾರ ಪ್ರಕಟಿಸಿದೆ. ಸಂಗೀತ ಮತ್ತು ನೃತ್ಯ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಕಲಾವಿದರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಅಕಾಡೆಮಿಯ ಅಧ್ಯಕ್ಷ ಪಂಡಿತ್ ಅನೂರು ಅನಂತ ಕೃಷ್ಣ ಶರ್ಮ ಅಧ್ಯಕ್ಷತೆಯಲ್ಲಿ ನಡೆದ ಸರ್ವಸದಸ್ಯರ ಸಭೆಯಲ್ಲಿ ಸಾಧಕರನ್ನು ಆಯ್ಕೆ ಮಾಡಲಾಗಿದೆ.

music

ಈ ಬಾರಿಯ ಗೌರವ ಪ್ರಶಸ್ತಿಗೆ ಹಿಂದೂಸ್ತಾನಿ ಸಂಗೀತದ ಹಿರಿಯ ಗಾಯಕ ಧಾರವಾಡದ ಆರ್.ಪಿ. ಅಸುಂಡಿ ಹಾಗೂ ಸುಗಮ ಸಂಗೀತ ಕಲಾವಿದೆ ಹರಿಹರಪುರದ ರಮಾ ಅರವಿಂದ ಅವರನ್ನು ಆಯ್ಕೆ ಮಾಡಲಾಗಿದೆ. ಆರ್.ಪಿ. ಅಸುಂಡಿಯವರು 16ನೇ ವಯಸ್ಸಿನಿಂದಲೇ ಸಂಗೀತದತ್ತ ಆಸಕ್ತಿ ಬೆಳೆಸಿಕೊಂಡು ಗಾಯಕರಾಗಿ, ಶಿಕ್ಷಕರಾಗಿ ಸಾವಿರಾರು ಶಿಷ್ಯಂದಿರನ್ನು ಬೆಳೆಸಿದವರು. ರಾಜಗುರು ಸಂಗೀತ ಪ್ರತಿಷ್ಠಾನದಲ್ಲಿ ಸಂಗೀತ ಶಿಕ್ಷಕರಾಗಿ ಸೇವೆ ಸಲ್ಲಿಸಿರುವ ಇವರು ಆಕಾಶವಾಣಿ ಕಲಾವಿದರೂ ಹೌದು. ರಮಾ ಅರವಿಂದರು ಸುಗಮ ಸಂಗೀತ ಕಲಾವಿದೆ ಮಾತ್ರವಲ್ಲ ಕನ್ನಡ ಚಿತ್ರರಂಗದದಲ್ಲಿ ಹಿನ್ನೆಲೆ ಗಾಯಕಿಯಾಗಿಯೂ ಕೆಲಸ ಮಾಡಿದ್ದಾರೆ. 

music


ಇನ್ನು ಸಂಗೀತ-ನೃತ್ಯದ ವಿವಿಧ ವಿಭಾಗದಲ್ಲಿ ವಾಷಿಕ ಪ್ರಶಸ್ತಿಗೆ ಆಯ್ಕೆಯಾದವರ ಸಾಲಿನಲ್ಲಿ, ಮಧೂರು ಪಿ. ಬಾಲಸುಬ್ರಹ್ಮಣ್ಯಂ, ಉಡುಪಿ (ಹಾಡುಗಾರಿಕೆ), ಸುಕನ್ಯಾ ರಾಂಗೋಪಾಲ್, ಬೆಂಗಳೂರು (ಘಟಂ), ಸುರೂಳಿ ಗಣೇಶ್ ಮೂರ್ತಿ, ಚಿಕ್ಕಮಗಳೂರು (ಮೃದಂಗ), ವಿ. ಮುರುಳಿ, ಶ್ರೀರಂಗಪಟ್ಟಣ (ನಾದಸ್ವರ), ಶ್ರೀಪಾದ ಹೆಗಡೆ, ಧಾರವಾಡ (ಗಾಯನ), ಪಂ. ರಾಜಪ್ರಭು ದೋತ್ರೆ, ಬೆಳಗಾವಿ (ಗಾಯನ), ಟಿ. ರಂಗ ಪೈ ತೋನ್ಸೆ, ಉಡುಪಿ (ತಬಲಾ), ನಯನಾ ರೈ, ಪುತ್ತೂರು (ನೃತ್ಯ ಗುರು), ಪ್ರವೀಣ್ ಕುಮಾರ್, ಬೆಂಗಳೂರು (ಭರತನಾಟ್ಯ), ಮಧು ನಟರಾಜ್, ಬೆಂಗಳೂರು (ಕಥಕ್), ಜಿ. ಗುರುಮೂರ್ತಿ, ತುಮಕೂರು (ನೃತ್ಯ–ಮೃದಂಗ), ಉಪಾಸನಾ ಮೋಹನ್, ಮಂಡ್ಯ, ವೈಕುಂಠದತ್ತ ಮಹಾರಾಜ (ಭಾಗವತರ), ಬೀದರ್, ಜಿ. ಸೋಮಶೇಖರದಾಸ್, ತುಮಕೂರು, ಎಚ್.ಎಸ್. ಗೋಪಾಲ್, ಶಿವಮೊಗ್ಗ (ಗಮಕ ವ್ಯಾಖ್ಯಾನ) ಮತ್ತು ಗಣೇಶ್ ಭಟ್, ಮೈಸೂರು (ಕೀಬೋರ್ಡ್) ಆಯ್ಕೆಯಾಗಿದ್ದಾರೆ. 

 

music


ಪ್ರಶಸ್ತಿ ಪ್ರದಾನ ಸಮಾರಂಭವು ಫೆಬ್ರವರಿ 6ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ. ಗೌರವ ಪ್ರಶಸ್ತಿಗೆ 50,000 ರೂ. ಹಾಗೂ ವಾರ್ಷಿಕ ಪ್ರಶಸ್ತಿಗೆ 25,000 ರೂ. ಗೌರವಧನ ನೀಡಲಾಗುತ್ತದೆ ಎಂದು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಕಟಣೆಯಿಂದ ತಿಳಿದು ಬಂದಿದೆ.

music
  • ನ್ಯೂಸ್ ಬ್ಯೂರೋ, ಟ್ರೂನ್ಯೂಸ್ ಕನ್ನಡ 

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.