ಕ್ರಿಸ್‌ಮಸ್ ಸಂಭ್ರಮಕ್ಕೆ ಸಾಥ್ ನೀಡುವ ಸವಿರುಚಿಗಳು

ಕ್ರಿಸ್‌ಮಸ್ ಮತ್ತು ಹೊಸ ವರ್ಷಕ್ಕೆ ದಿನಗಣನೆ ಆರಂಭವಾಗಿದ್ದು...ಇದರಲ್ಲಿ ಮೊದಲಿಗೆ ಬರುವ ಕ್ರಿಸ್‌ಮಸ್ ಹಬ್ಬವು, ರುಚಿರುಚಿಯಾದ ತಿಂಡಿಗಳುನ್ನು ಮಾಡಿ ರುಚಿ ನೋಡುವ ಸಮಯ. ನಿಮ್ಮ ಸ್ನೇಹಿತರೊಂದಿಗೆ, ಕುಟುಂಬದವರೊಂದಿಗೆ ಕಾಲ ಕಳೆಯುವ ಸುಂದರ ಹಾಗು ಅದ್ಭುತ ಸಮಯವನ್ನು ಬಗೆ ಬಗೆಯ ತಿನಿಸುಗಳೊಂದಿಗೆ ಹಬ್ಬದ ಖುಷಿಯನ್ನು ಇಮ್ಮುಡಿಗೊಳಿಸಿ.

christmas


ಈ ಹಬ್ಬದ ಸಂಭ್ರಮಕ್ಕೆ ಕೇಕ್, ಪುಡಿಂಗ್, ಸ್ನಾಕ್ಸ್ಗಳಿಲ್ಲದಿದ್ದರೆ ಏನು ಮಜಾ ಅಲ್ವ...? ಹೀಗಾಗಿ ಇಲ್ಲಿ ಕೆಲವೊಂದು ತಿನಿಸುಗಳನ್ನು ಪರಿಚಯಿಸಿದ್ದೇವೆ. ಇವು ನಿಮ್ಮ ನಾಲಿಗೆಯ ರುಚಿಯನ್ನು ತಣಿಸುವುದಷ್ಟೇ ಅಲ್ಲದೆ ಕ್ರಿಸ್‌ಮಸ್ ಪಾರ್ಟಿಗೆ ವಿಷೇಶ ಕಳೆ ತಂದು ಕೊಡುತ್ತದೆ. ಹಾಗಾಗಿ ಇವುಗಳ ಮೇಲೆ ಒಮ್ಮೆ ಕಣ್ಣಾಡಿಸಿ.  

crissmas

ಬಟರ್ ಸ್ಪಾಂಜ್ ವೆನಿಲಾ ಕೇಕ್
ಬೇಕಾಗುವ ಸಾಮಗ್ರಿಗಳು: 2 ಕಪ್ ಅಕ್ಕಿ ಹಿಟ್ಟು, 2-3 ಕಪ್ ಹಾಲು, 1 ಕಪ್ ಬೆಣ್ಣೆ, 8-10 ಮೊಟ್ಟೆ, 1ಚಮಚ ಅಡುಗೆ ಸೋಡ, 2 ಕಪ್ ಸಕ್ಕರೆ, 2 ಚಮಚ ವೆನಿಲ್ಲಾ ಎಸೆನ್ಸ್, ಚಿಕ್ಕದಾಗಿ ಕತ್ತರಿಸಿದ ಬಾದಾಮಿ ಮತ್ತು ಗೊಡಂಬಿ

butter sponje vennila cake


ಬಟರ್ ಸ್ಪಾಂಜ್ ವೆನಿಲಾ ಕೇಕ್ ಮಾಡುವ ವಿಧಾನ: ಮೊದಲು ಓವೆನನ್ನು 350ಎಫ್ ನಷ್ಟು ಬಿಸಿ ಮಾಡಬೇಕು, ಬೆಣ್ಣೆ ಮತ್ತು ಸಕ್ಕರೆ ಬೆರೆಸಿ ಮೃದುವಾಗುವವರೆಗೂ ಮಿಕ್ಸಿಯಲ್ಲಿ ತಿರುವಿ. ಈಗ ಮೊಟ್ಟೆ ಬೆರೆಸಿ ಚೆನ್ನಾಗಿ ಮತ್ತೆ ಮಿಕ್ಸಿಯಲ್ಲಿ ತಿರುಗಿಸಬೇಕು. ಈ ಮಿಶ್ರಣಕ್ಕೆ ಅಕ್ಕಿ ಹಿಟ್ಟು ಮತ್ತು ಮೊಸರನ್ನು ಹಾಕಿ ಚೆನ್ನಾಗಿ ನಾದಬೇಕು, ಈಗ ಬಾದಾಮಿ, ಗೊಡಂಬಿ, ವೆನಿಲ್ಲಾ ಎಸೆನ್ಸ್ ಹಾಕಿ ತುಪ್ಪ ಸವರಿದ ಬಟ್ಟಲಿಗೆ ಹಾಕಿ ಅದನ್ನು 40-45 ನಿಮಿಷ ಓವೆನ್ನಲ್ಲಿಡಬೇಕು. ಬಟರ್ ಸ್ಪಾಂಜ್ ವೆನಿಲ್ಲಾ ಕೇಕ್ ತಿನ್ನಲು ಸಿದ್ಧವಾಗಿರುತ್ತದೆ.

butter sponje vennila cake

ಕ್ರಿಸ್‌ಮಸ್ ಪುಡಿಂಗ್ 
ಬೇಕಾಗುವ ಸಾಮಗ್ರಿಗಳು: ರವಾ 2 ಚಮಚ, ಮೊಟ್ಟೆ 3, ಹುರಿದ ಗೊಡಂಬಿ, ಪುಡಿ ಮಾಡಿದ ಸಕ್ಕರೆ 12 ಚಮಚ, ತೆಂಗಿನ ತುರಿ 1/2 ಬಟ್ಟಲು, ಬಾದಾಮಿ, ಉಪ್ಪು ಚುಟುಕಿ, ಜಾಯಿಕಾಯಿ ಪುಡಿ ಚುಟುಕಿ, ತುಪ್ಪ 2 ಚಮಚ.

christmas pudding

ಕ್ರಿಸ್ಮಸ್ ಪುಡಿಂಗ್ ಮಾಡುವ ವಿಧಾನ: ತುಪ್ಪವನ್ನು ಕಾಯಿಸಿ ಅದರಲ್ಲಿ ರವೆಯನ್ನು ಕಂದು ಬಣ್ಣ ಬರುವವರೆಗೆ ಕುರಿದು ತೆಗೆದಿಡಿ. ಮೊಟ್ಟೆಗಳ ಹಳದಿ ಹಾಗು ಬಿಳಿ ಭಾಗಗಳನ್ನು ಬೇರ್ಪಡಿಸಿ. ಒಂದು ಪಾತ್ರೆಯಲ್ಲಿ ಸಕ್ಕರೆ, ಚೆನ್ನಾಗಿ ಮಿಶ್ರಣ ಮಾಡಿದ ಮೊಟ್ಟೆಯ ಹಳದಿ ಭಾಗ ಬೆಣ್ಣೆ, ತುರಿದ ಕಾಯಿ, ಜಾಯಿಕಾಯಿ ಪುಡಿ ಮತ್ತು ಉಪ್ಪನ್ನು ಬೆರೆಸಿ, ಈಗ ಹುರಿದಿಟ್ಟ ರವೆಗೆ ಚಿನ್ನಾಗಿ ಮಿಶ್ರಣ ಮಾಡಿದ ಮೊಟ್ಟಯ ಬಿಳಿ ಭಾಗವನ್ನು ಬೆರೆಸಿ, ನಂತರ ಮೊದಲೇ ತಯಾರಿಸಿದ ಮಿಶ್ರಣಕ್ಕೆ ಹಾಕಿ ಚೆನ್ನಾಗಿ ಕಲಕಿ, ಗೋಡಂಬಿ ಮತ್ತು ಬಾದಾಮಿ ಚುರುಗಳನ್ನು ಹಾಕಿ ಬೆರೆಸಿ. ಅದನ್ನು ಒಂದು ಪಾತ್ರೆಗೆ ಸುರಿದುಕೊಳ್ಳಿ, ಈ ಮಿಶ್ರಣವನ್ನು 45 ನಿಮಿಷಗಳ ಕಾಲ ಹಬೆಯಲ್ಲಿ ಬೆಯಿಸಿದರೆ ಕ್ರಿಸ್ಮಸ್ ಪುಡಿಂಗ್ ಸವಿಯಲು ಸಿದ್ಧ. 

christmas pudding

ಕಾಫಿ ಕುಕ್ಕೀಸ್
ಬೇಕಾಗುವ ಸಾಮಗ್ರಿಗಳು: ಮೈದಾ ಹಿಟ್ಟು-1 1/2 ಕಪ್, ಬೆಣ್ಣೆ- 50 ಗ್ರಾಂ ಪುಡಿ ಮಾಡಿದ ಕಂದು ಸಕ್ಕರೆ-4 ದೊಡ್ಡ ಚಮಚ, ಕಾಫಿ ಪುಡಿ-ಎರಡು ದೊಡ್ಡ ಚಮಚ, ವೆನಿಲ ಎಸೆನ್ಸ್ ,ಮೊಟ್ಟಯ ಬಿಳಿಭಾಗ-ಎರಡು ಮೊಟ್ಟೆಗಳಿಂದ ಬೆರ್ಪಡಿಸಿದ್ದು, ಕಾಯಿತುರಿ ಅರ್ಧ ಕಪ್, ಉಪ್ಪು ಚಿಟಕೆಯಷ್ಟು, ಕುಕ್ಕಿ ಅಚ್ಚುಗಳು, ಬಟರ್ ಪೇಪ್, ಬಿಳಿಯ ಕ್ರೀಂ-1 ಕಪ್, ಉಗುರು ಬೆಚ್ಚನೆಯ ನೀರು-2 ಕಪ್ 

cofee cookies

ಕಾಫಿ ಕುಕ್ಕೀಸ್ ಮಾಡುವ ವಿಧಾನ: ಒಂದು ಅಗಲವಾದ ಮತ್ತು ದಪ್ಪ ತಳದ ಪಾತ್ರೆಯಲ್ಲಿ ಬೆಣ್ಣೆ ಬಿಸಿಮಾಡಿ ಕರಗಿಸಿ ಅದರಲ್ಲಿ ಸಕ್ಕರೆ ಹಾಕಿ ಮಿಶ್ರಣ ಮಾಡಿ, ಇದಕ್ಕೆ ಮೊಟ್ಟೆಯ ಬಿಳಿ ಭಾಗ, ವೆನಿಲ್ಲಾ ಎಸೆನ್ಸ್ ಹಾಕಿ ಸುಮಾರು ಮೂರರಿಂದ ನಾಲ್ಕು ನಿಮಿಷ ಚಿಕ್ಕ ಉರಿಯಲ್ಲಿ ನೊರೆನೊರೆಯಾಗುವವರೆಗೂ ತಿರುವುತ್ತಾ ಇರಿ, ಇನ್ನೋಂದು ಪಾತ್ರೆಯಲ್ಲಿ ಮೈದಾ  ಅಡುಗೆ ಸೋಡಾ, ಕಾಫಿ ಪುಡಿ, ಉಪ್ಪು ಎಲ್ಲವನ್ನೂ ಸೇರಿಸಿ ಮಿಶ್ರಣ ಮಾಡಿ, ಈ ಪಾತ್ರೆಗೆ ಬಿಸಿಯಾಗಿರುವ ದ್ರವವನ್ನು ಸೇರಿಸಿ, ಜೊತೆಗೇ ಕೊಂಚ ಉಹುರು ಬೆಚ್ಚನೆಯ ನೀರನ್ನು ಸೇರಿಸಿ ಮರದ ಚಮಚದಿಂದ ಮಿಶ್ರಣ ಮಾಡಿ ಸ್ವಲ್ಪ ತಣ್ಣಗಾದ ಮೇಲೆ ಚಪಾತಿ ಹಿಟ್ಟಿನ ಹದ ಬರುವವರೆಗೆ ಕೈಯಿಂದ ಕಲೆಸಿಕೊಳ್ಳಿ.

cofee cookies

ಬಳಿಕ ಕಾಯಿತುರಿ ಹಾಕಿ ಕಲೆಸಿ, ಇದೇ ಹೊತ್ತಿನಲ್ಲಿ ಓವೆನ್ ಅನ್ನು 350 ಡಿಗ್ರಿ ಎಫ್ ತಾಪಮಾನದಲ್ಲಿ ಬಿಸಿಮಾಡಿ. ನಿಮ್ಮ ಇಷ್ಟದ ಆಕಾರದ ಅಚ್ಚುಗಳ ಒಳಗೆ ಕೊಂಚ ಬೆಣ್ಣೆ ಸವರಿ ಹಿಟ್ಟನನ್ನು ತುಂಬಿಸಿ, ಬಟರ್ ಪೇಪರ್ ಅಚ್ಚುಗಳ ಗಾತ್ರಕ್ಕೆ ಅನುಗುಣವಾಗಿ ಕತ್ತರಿಸಿ ಪ್ರತಿ ಅಚ್ಚನ್ನೂ ಮುಚ್ಚಿ, ಬಳಿಕ ಓವೆನ್‌ನಲ್ಲಿ ಸುಮಾರು ಏಳರಿಂದ ಹತ್ತು ನಿಮಿಷಗಳವರೆಗೆ 60% ಪ್ರಖರತೆಯಲ್ಲಿ ಕುಕ್ಕೀಸ್ಗಳನ್ನು ಬಿಸಿ ಮಾಡಿ, ಸವಿಯಲು ಕೊಡಿ.

plum cake


ಪ್ಲಮ್ ಕೇಕ್
ಬೇಕಾಗುವ ಸಾಮಗ್ರಿಗಳು: ಮೈದಾ 1 ಕಪ್. ವಾಲ್ನಟ್ಸ್ ಕತ್ತರಿಸಿದ್ದು, ಬೇಕಿಂಗ್ ಪೌಡರ್, ರೈಸಿನ್ಸ್-3 ಟೀಬಲ್ ಸ್ಪೂನ್, ಬ್ರೌನ್ ಶುಗರ್ 1ಕಪ್, ವೆನಿಲ್ಲಾ ಎಸೆನ್ಸ್, ಮೊಟ್ಟೆಗಳು 3, ಬೆಣ್ಣೆ, ಲಿಂಬೆ ತಿರುಳಿನ ಹುಡಿ, ಚೆರಿ

plum cake

ಪ್ಲಮ್ ಕೇಕ್ ಮಾಡುವ ವಿಧಾನ: ಓವನ್ 160 ಡಿಗ್ರಿ ಉಷ್ಣತೆಯಲ್ಲಿ ಬಿಸಿ ಮಾಡಿ, ಮೈದಾ ಹಾಗೂ ಬೇಕಿಂಗ್ ಪೌಡರರನ್ನು ಜರಡಿ ಹಿಡಿಯಿರಿ, ಇದೀಗ ವಾಲ್‌ನಟ್, ರೈಸಿನ್ಸ್ಗಳನ್ನು ಚಿನ್ನಾಗಿ ಮಿಶ್ರಣ ಮಾಡಿ, ಇನ್ನೊಂದು ಪಾತ್ರೆಯಲ್ಲಿ ಬೆಣ್ಣೆ ಮತ್ತು ಬ್ರೌನ್ ಶುಗರನ್ನು ಚಿನ್ನಾಗಿ ಕಲಸಿಕೊಳ್ಳಿ, ವೆನಿಲ್ಲಾ ಎಸೆನ್ಸ್, ಮೊಟ್ಟೆಗಳು ಮತ್ತು ಲಿಂಬೆ ತಿರುಳಿನ ಹುಡಿಯನ್ನು ಸೇರಿಸಿ, ಜರಡಿಯಾಡಿಸಿದ ಹುಡಿಯನ್ನು ನಿಧಾನವಾಗಿ ಹಾಕಿ ಮತ್ತು ಮಿಶ್ರ ಮಾಡಿ, ಬಟರ್‌ನೊಂದಿಗೆ ಕೇಕ್ ಟಿನ್ನನ್ನು ಗ್ರೀಸ್ ಮಾಡಿ ನಂತರ ಮಿಶ್ರಣವನ್ನು ಅದಕ್ಕೆ ಹಾಕಿ, 15-20 ನಿಮಿಷಗಳ ಕಾಲ ಬೇಯಿಸಿ ನಂತರ ಆರಲು ಬಿಡಿ, ಪ್ಲಮ್ ಕೇಕ್ ಸವಿಯಲು ರೆಡಿ. ಕೇಕನ್ನು ತುಂಡಯಗಳಾಗಿ ಮಾಡಿ ಮತ್ತು ಕೇಕ್ನ ಮೇಲೆ ತುಂಡರಿಸಿದ ಚೆರಿಗಳನ್ನು ಇಟ್ಟು ಅಲಂಕರಿಸಿ.

plum cake

ಕೋರ್ನ್ ಫ್ಲೀಟ್ಟರ್ಸ್
ಬೇಕಾಗುವ ಸಾಮಗ್ರಿಗಳು: ಸ್ಟೀಟ್ ಕೋರ್ನ್ 300 ಗ್ರಾಂ, 1 ಕಪ್ ಫ್ರೆಶ್ ಬ್ರೆಡ್ ಕ್ರಮ್ಸ್, 1ಕಪ್ ಕಾರ್ನ್ಸ್ಟಾರ್ಚ್, 1/4 ಕಪ್ ಸ್ಪ್ರಿಂಗ್ ಆನಿಯನ್ ಚಿಕ್ಕದಾಗಿ ತುಂಡರಿಸಿದ್ದು, ರೆಡ್ ಚಿಲ್ಲಿ ಫ್ಲೇಕ್ಸ್, ಕಾಳು ಮೆಣಸಿನ ಪುಡಿ, ಉಪ್ಪು, ಎಣ್ಣೆ ಕರಿಯಲು

corn flitters

ಕೋರ್ನ್ ಫ್ಲೀಟ್ಟರ್ಸ್ ಮಾಡುವ ವಿಧಾನ: ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿಕೊಳ್ಳಿ, ಒಂದು ಪಾತ್ರೆಯಲ್ಲಿ ಸ್ಟೀಟ್ ಕೋರ್ನ್, ಬ್ರೆಡ್ ಕ್ರಮ್ಸ್, ಸ್ಪ್ರಿಂಗ್ ಆನಿಯನ್, ರೆಡ್ ಚಿಲ್ಲಿ ಫ್ಲೇಕ್ಸ್, ಕಾಳು ಮೆಣಸಿನ ಪುಡಿ, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಕಾರ್ನ್ ಸ್ಟಾರ್ಚ್ ಹಾಕಿ ಪುನಃ ಮಿಕ್ಸ್ ಮಾಡಿ, ಮಿಶ್ರಣವನ್ನು ಬಾಲ್ ಅಥವಾ ಪಕೋಡ ರೂಪದಲ್ಲಿ ತಯಾರಿಸಿ ಕಾದ ಎಣ್ಣೆಯಲ್ಲಿ ಗೋಲ್ಡನ್ ಬ್ರೌನ್ ಆಗುವ ತನಕ ಕಾಯಿಸಿ ಬಿಸಿ ಬಿಸಿ ಸಾಸ್‌ನೊಂದಿಗೆ ಸವಿಯಲು ಕೊಡಿ.
 

corn flitters

 

ಮಶ್ರೂಮ್ ಕಟ್ಲೇಟ್
ಬೇಕಾಗುವ ಸಾಮಗ್ರಿಗಳು: 18ರಿಂದ20 ಮಶ್ರೂಮ್ ಚಿಕ್ಕದಾಗಿ ತುಂಡರಿಸಿದ್ದು, 1 ಟೀ ಚಮಚ ಎಣ್ಣೆ ಶಾಲೋ ಫ್ರೈ ಮಾಡಲು, 1 ಈರುಳ್ಳಿ, 1 ಟಮೆಟೋ ಸಣ್ಣ ಸಣ್ಣದಾಗಿ ತುಂಡರಿಸಿದ್ದು, ಉಪ್ಪು, ಗರಮ್ ಮಸಾಲಾ, ಅರಶಿನ, ಜೀರಿಗೆ, ಕೊತ್ತಂಬರಿ ಪೌಡರ್, ಖಾರದ ಪುಡಿ, ಆಲುಗಡ್ಡೆ ಬೇಯಿಸಿ ಕಿವುಚಿದ್ದು, 1 ಕಪ್ ಅಕ್ಕಿ ಹಿಟ್ಟು. 

mashroom cutlet

ಮಾಡುವ ವಿಧಾನ: ಒಂದು ನಾನ್ ಸ್ಟಿಕ್ ಪಾನ್‌ಗೆ ಒಂದು ಚಮಚ ಎಣ್ಣೆ ಹಾಕಿ ಕಾದ ನಂತರ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ ನಂತರ ಮಶ್ರೂಮ್ ಹಾಕಿ 2 ನಿಮಿಷ ತನಕ ಕಾಯಿಸಿ ತದನಂತರ ಟೊಮೋಟೋ ಹಾಕಿ ಚನ್ನಾಗಿ ಮಿಕ್ಸ್ ಮಾಡಿ 5ರಿಂದ 7 ನಿಮಿಷ ಬೇಯಲು ಬಿಡಿ, ಇದಕ್ಕೆ ಉಪ್ಪು, ಗರಂ ಮಸಾಲಾ, ಅರಶಿನ, ಜೀರಿಗೆ,, ಕೊತ್ತಂಬರಿ ಪೌಡರ್ , ಖಾರದ ಪುಡಿ, ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಸರಿಯಾಗಿ ಬೇಯಲು ಬಿಡಿ, ಬೆಂದ ನಂತರ ಉರಿಯಿಂದ ತೆಗೆದು ತಣ್ಣಗಾಗಲು ಬಿಡಿ. ಈ ಮಿಶ್ರಣಕ್ಕೆ ಕಿವುಚಿದ ಆಲುಗಡ್ಡೆ ಹಾಕಿ ಮಿಕ್ಸ್ ಮಾಡಿ. ಇದನ್ನು ಟಿಕ್ಕಿಸ್ ರೂಪದಲ್ಲಿ ಶೇಪ್ ಕೊಟ್ಟು ಅಕ್ಕಿ ಹಿಟ್ಟಿನಲ್ಲಿ ಅದ್ದಿ ಪಕ್ಕಕ್ಕಿಡಿ. ನಂತರ ಒಂದು ಪಾನ್‌ಗೆ ಸ್ವಲ್ಪ ಎಣ್ಣೆ ಹಾಕಿ ಅದ್ದಿ ಇಟ್ಟ ಟಿಕ್ಕಿಸ್‌ಗಳನ್ನು ಎರಡು ಬದಿಯಲ್ಲಿ ಕೆಂಪು ಬಣ್ಣ ಬರುವವರೆಗೆ ಶಾಲೋ ಫ್ರೈ ಮಾಡಿ ಸಾಸ್ನೊಂದಿಗೆ ಸರ್ವ್ ಮಡಿ.

mashroom cutlet
  • ಸುಲಭಾ.ಆರ್.ಭಟ್
  • ನ್ಯೂಸ್ ಬ್ಯೂರೋ, ಟ್ರೂನ್ಯೂಸ್ ಕನ್ನಡ

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.