ಕಣ್ಣಿರಿಟ್ಟಿದ್ಯಾಕೆ ಕೆಜಿಎಫ್ ಸಂಗೀತ ನಿರ್ದೇಶಕ ?

ಬೆಂಗಳೂರು : ಕೆಜಿಎಫ್, ಉಗ್ರಂ ಸಿನಿಮಾದ ಸಂಗೀತದಿಂದಲೇ ಪ್ರಖ್ಯಾತಿಯನ್ನು ಪಡೆದಿರೋ ರವಿ ಬಸ್ರೂರು ಇದೀಗ ಕಣ್ಣಿರಿಟ್ಟಿದ್ದಾರೆ. ತನ್ನ ಮ್ಯೂಸಿಕ್ ಸ್ಟೂಡಿಯೋದಲ್ಲಿ ಕುಳಿತು ತನ್ನ ಮನದಾಳದ ನೋವನ್ನ ವಿಡಿಯೋ ಮೂಲಕ ಹರಿಬಿಟ್ಟಿದ್ದಾರೆ. ರವಿ ಬಸ್ರೂರು ಕಣ್ಣಿರಿಟ್ಟಿರೋ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಾರೀ ವೈರಲ್ ಆಗಿದೆ.
ಸದಾ ಹೊಸ ಹೊಸ ಪ್ರಯೋಗಳಿಂದಲೇ ಪ್ರಖ್ಯಾತಿಗಳಿಸಿರೋ ರವಿ ಬಸ್ರೂರು. ಕೆಜಿಎಫ್ ಸಿನಿಮಾದಲ್ಲಿ ಹೊಸ ಅಲೆಯ ಮ್ಯೂಸಿಕ್ ಸಿನಿ ಪ್ರೇಕ್ಷಕರಿಗೆ ಬಹುಮಟ್ಟಿಗೆ ಇಷ್ಟವಾಗಿತ್ತು. ಸದಾ ಹೊಸತನಕ್ಕೆ ತುಡಿಯುತ್ತಿದ್ದ ರವಿ ಬಸ್ರೂರು ಉಡುಪಿ ಜಿಲ್ಲೆಯ ಬಾಲ ಕಲಾವಿದರನ್ನು ಹಾಕಿಕೊಂಡು ಗಿರ್ಮಿಟ್ ಅನ್ನೋ ಸಿನಿಮಾ ಮಾಡಿದ್ದರು. ಬಾಲ ನಟರಿಗೆ ಯಶ್, ರಾಧಿಕಾ ಪಂಡಿತ್ ಸೇರಿ ಖ್ಯಾತ ನಟದ ವಾಯ್ಸ್ ಡಬ್ ಮಾಡೋ ಮೂಲಕ ಭಾರತೀಯ ಸಿನಿಮಾ ಇತಿಹಾಸದಲ್ಲಿಯೇ ಹೊಸ ಪ್ರಯೋಗವೊಂದನ್ನು ಮಾಡಲಾಗಿತ್ತು. ಗಿರ್ಮಿಟ್ ಬಿಡುಗಡೆಗೂ ಮುನ್ನ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿತ್ತು. ಮಾತ್ರವಲ್ಲ ರಿಲೀಸ್ ಆಗುತ್ತಿದ್ದಂತೆಯೇ ಮಕ್ಕಳ ಸಿನಿಮಾವನ್ನು ಜನ ಮೆಚ್ಚಿಕೊಂಡಿದ್ದಾರೆ. ರಾಜ್ಯದಾದ್ಯಂತ ಸುಮಾರು 80ಕ್ಕೂ ಅಧಿಕ ಥಿಯೇಟರ್ ಗಳಲ್ಲಿ ಚಿತ್ರ ಪ್ರದರ್ಶನವನ್ನು ಕಂಡಿತ್ತು. ಒಂದು ವಾರ ಭರ್ಜರಿ ಕಲೆಕ್ಷನ್ ಕಂಡಿದ್ದ ಚಿತ್ರವನ್ನು ಏಕಾಏಕಿ ಬಹುತೇಕ ಥಿಯೇಟರ್ ಗಳಿಂದ ಎತ್ತಂಗಡಿ ಮಾಡಲಾಗಿದೆ. ಅದ್ರಲ್ಲೂ ಕರಾವಳಿ ಭಾಗದ ಜನರು ಚಿತ್ರ ನೋಡಕ್ಕೆ ಥಿಯೇಟರ್ ಕಡೆಗೆ ಮುಖ ಮಾಡಲಿಲ್ಲಾ ಅನ್ನೋದು ರವಿ ಬಸ್ರೂರು ನೋವು.
ಕುಂದ ಕನ್ನಡ ಭಾಷೆ, ಕುಂದ ಕನ್ನಡ ಸಿನಿಮಾಗಳನ್ನು ಪ್ರಖ್ಯಾತಿಗಳಿಸುವಲ್ಲಿ ರವಿ ಬಸ್ರೂರು ಸಾಕಷ್ಟು ಪರಿಶ್ರಮವಹಿಸಿದ್ದರು. ಅವರ ಕುಂದಾಪ್ರ ಕನ್ನಡ ಆಲ್ಬಂಮ್ ಹವಾ ಸೃಷ್ಟಿಸಿತ್ತು. ಆದ್ರೂ ಗಿರ್ಮಿಟ್ ಸಿನಿಮಾವನ್ನು ತನ್ನೂರಿನ ಜನರೇ ನೋಡಿಲ್ಲಾ ಅನ್ನೋ ಕೊರಗು ರವಿ ಬಸ್ರೂರು ಅವರನ್ನು ಇನ್ನಿಲ್ಲದಂತೆ ಕಾಡಿತ್ತು. ಇನ್ನೊಂದೆಡೆ ದೊಡ್ಡ ಸಿನಿಮಾಗಳು ರಿಲೀಜ್ ಆಗೋ ನೆಪದಲ್ಲಿ ತನ್ನ ಸಿನಿಮಾವನ್ನು ಎತ್ತಂಗಡಿ ಮಾಡಿದ್ರೂ ಅನ್ನೋ ನೋವು ಕೂಡ ರವಿ ಅವರನ್ನು ಕಾಡುತ್ತಿದೆ. ಹೀಗಾಗಿಯೇ ರವಿ ಬಸ್ರೂರು ತನ್ನ ನೋವನ್ನೆಲ್ಲಾ ವಿಡಿಯೋ ಮೂಲಕ ಹರಿಬಿಟ್ಟಿದ್ದು, ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

 

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.