ಸೀರೆ ಸುಂದರವಾಗಿಯೂ ಆಕರ್ಷಕವಾಗಿಯೂ ಹಾಗೂ ಸ್ತ್ರೀಯರಿಗೆ ಗತ್ತುಗೈರತ್ತುಗಳನ್ನು ನೀಡುವಂತ ಉಡುಗೆ ಎಂದರೆ ತಪ್ಪಾಗುದಿಲ್ಲ. ಸೀರೆಗಳು ಭಾರತೀಯ ಸಂಸ್ಕೃತಿಯ ಸಂಕೇತವಾಗಿದ್ದು ಇವುಗಳನ್ನು ಯಾವುದೇ ಕಾರಣಕ್ಲೂ ಪರಿತ್ಯಜಿಸುವಂತಿಲ್ಲ. ಇಷ್ಟಾದರೂ ಸಹ ಅವೇ ಹಳೆಯ ಸೀರೆಗಳನ್ನೇ ಪದೇ ಪದೇ ಉಟ್ಟುಕೊಳ್ಳುವುದಕ್ಕೇ ಬೇಸರರವೆಂದೆನಿಸುತ್ತದೆ ಅಲ್ಲವೇ..?

ಹಾಗಿದ್ದಲ್ಲಿ ಆ ಹಳೆಯ ರೇಷ್ಮೆ ಸೀರೆಗಳನ್ನು ಮರುಬಳಸಬಹುದು. ಇದಕ್ಕೆ ಸಂಬಂಧಿಸಿದಂತೆ ಕೆಲವೊಂದು ಮೂಲಭೂತ ಉಪಾಯಗಳು ಇಲ್ಲಿವೆ.

*ಕುಶನ್ ಹಾಗೂ ತಲೆದಿಂಬಿನ ಕವರ್ಗಳು
ಸೀರೆಗಳು ಸಾಕಷ್ಟು ದೀರ್ಘವಾಗಿರುತ್ತವೆ ಆದ್ದರಿಂದ ಹಳೆಯ ಸೀರೆಗಳನ್ನು ಕುಶನ್ ಹೊದಿಕೆಗಳ ರೂಪದಲ್ಲಿ ಹೇಗೆ ಮರುಬಳಸಿಕೊಳ್ಳಬಹುದೆಂಬುದನ್ನು ಅರಿತಿರುವುದು ಒಂದು ಉತ್ತಮ ವಿಚಾರವಾಗಿದೆ. ಕೇವಲ ಒಂದೇ ಒಂದು ಸೀರೆಯನ್ನು ಬಳಸಿಕೊಂಡು ಹತ್ತಾರು ಕುಶನ್ಗಳನ್ನು ಹಾಗು ತಲೆದಿಂಬುಗಳನ್ನು ತಯಾರಿಸಬಹುದು.

ಈ ಹೊದಿಕೆಗಳು ಆಕರ್ಷಕವಾಗಿ ಕಾಣುವಂತೆ ಮಾಡುವುದಕ್ಕಾಗಿ ಸೀರೆಯ ಅಂಚನ್ನು ಸೂಕ್ತವಾದ ರೀತಿಯಲ್ಲಿ ಬಳಸಿಕೊಳ್ಳಬಹುದು.

ಜೊತೆಗೆ ಈ ಸೀರೆಗಳ ಮೇಲೆ ಒಂದಿಷ್ಟು ಕಸೂತಿಗಳನ್ನು, ಗಾಜಿನ ಕುಸುರಿಕೆಲಸಗಳನ್ನು ಇಲ್ಲವೇ ಫ್ಯಾಬ್ರಿಕ್ ಪೇಂಟಿಂಗ್ ಮಾಡಬಹುದು. ಹಳೆಯ ಸೀರೆಗಳನ್ನು ಮರಿಬಳಸಿಕೊಳ್ಳುವ ನಿಟ್ಟಿನಲ್ಲಿ ಇದೊಂದು ಅತ್ಯುತ್ತಮ ಹಾಗೂ ಸುಲಭದ ಮಾರ್ಗವಾಗಿದೆ.

*ಕರ್ಟನ್ಗಳು
ಹಳೆಯಸೀರೆಗಳನ್ನು ಪುನಃ ಬಳಸುವ ಮತ್ತೊಂದು ಉಪಾಯ ಏನೆಂದರೆ ಅವುಗಳನ್ನು ಕೊಠಡಿಗಳ ಕರ್ಟನ್ಗಳನ್ನಾಗಿ ಪರಿವರ್ತಿಸುವುದು. ಕೊಠಡಿಯ ಗೋಡೆಗಳಿಗೆ ನೀಡಲಾಗಿರುವ ಬಣ್ಣಕ್ಕೆ ಹೊಂದಾಣಿಕೆಯಾಗುವ ಬಣ್ಣದ ಹಳೆಯ ಸೀರೆಯನ್ನು ಬಳಸಿಕೊಂಡು ಕರ್ಟನ್ಗಳನ್ನು ರಚಿಸಿಕೊಳ್ಳಬಹುದು. ಹೀಗೆ ಮಾಡಿದ್ದಲ್ಲಿ ನಿಮ್ಮ ಕೊಠಡಿಯ ಅಂದ ಮತ್ತಷ್ಟು ಹೆಚ್ಚುತ್ತದೆ.

*ಬೆಡ್ಶೀಟ್ಗಳು
ಸಾಮಾನ್ಯವಾಗಿ ಬೆಡ್ಶೀಟ್ಗಳನ್ನು ಹಳೆಯ ಸೀರೆಗಳಿಂದಲೇ ಮಾಡಲಾಗುತ್ತದೆ. ಬೆಡ್ಶೀಟ್ಗಾಗಿ ಸೀರೆಯನ್ನು ಬಳಸಿಕೊಳ್ಳುವಾಗ ಆ ಸೀರೆಗೆ ಒಂದಿಷ್ಟು ಪ್ಯಾಚ್ ಅಥವಾ ಲೇಸ್ ಕೆಲಸ ಮಾಡುವರ ಮೂಲಕ ಅದು ತಲೆದಿಂಬಿನೊಂದಿಗೆ ಹೊಂದಾಣಿಕೆಯಾಗುವಂತೆ ಮಾಡಬೇಕು. ಅವೆರಡು ಜೊತೆಗೆ ಸೇರಿ ತುಂಬಾ ಅಂದವಾಗಿ ಕಾಣುತ್ತದೆ.

* ಸ್ಕರ್ಟ್ಗಳು, ಟಾಪ್ಗಳು ಮತ್ತು ಸಲ್ವಾರ್ಗಳು
ಹಳೆಯ ರೇಷ್ಮೆ ಸೀರೆಯನ್ನು ಸುಂದರವಾದ ಸಲ್ವಾರ್, ಸ್ಕರ್ಟ್, ಟಾಪ್ಗಳನ್ನಾಗಿ ಪರಿವರ್ತಿಸಬಹುದು. ಒಂದಿಷ್ಟು ಕಸೂತಿ ಕೆಲಸ. ಗ್ಲಾಸ್ ವರ್ಕ್, ಬೀಡ್ಸ್ ಮುಂತಾದವುಗಳನ್ನು ಬಳಸಿ ನಿಮ್ಮ ಸೃಜನಶೀಲತೆ, ಕಲಾತ್ಮಕತೆಯನ್ನು ಆ ಸೀರೆಗೆ ನೀವು ಸೇರಿಸಿದಲ್ಲಿ ಅಂದವಾದ ಡ್ರೆಸ್ ರೆಡಿಯಾಗುತ್ತದೆ ಹಾಗೂ ಹಳೆಯ ಸೀರೆಗೆ ಹೊಸ ಕಳೆಯನ್ನು ತಂದುಕೊಡತ್ತದೆ.

- ಸುಲಭಾ.ಆರ್.ಭಟ್
- ಫ್ಯಾಷನ್ ಬ್ಯೂರೋ, ಟ್ರೂನ್ಯೂಸ್ ಕನ್ನಡ