ಗುಜರಾತನ್ನು ಹಿಂದಿಕ್ಕಿ ಅತಿ ಹೆಚ್ಚು ಹತ್ತಿ ಬೆಳೆಯುವ ಎರಡನೇ ರಾಜ್ಯವಾಗಿ ಹೊರಹೊಮ್ಮಿದ ತೆಲಂಗಾಣ.

ತೆಲಂಗಾಣ: ಅತಿ ಹೆಚ್ಚು ಹತ್ತಿ ಬೆಳೆಯುವ ಎರಡನೇ ರಾಜ್ಯ ಗುಜರಾತ್ ರಾಜ್ಯವನ್ನು ಹಿಂದಿಕ್ಕಿದ ತೆಲಂಗಾಣ ಹತ್ತಿ ಬೆಳೆಯುವಲ್ಲಿ ನಂಬರ್ ಟು ರಾಜ್ಯವಾಗಿ ಅಲ್ಪ ಸಮಯದಲ್ಲಿ ಹೊರಹೊಮ್ಮಿದೆ.

ಇದು ಅಲ್ಲದೆ ತನ್ನ ಹತ್ತಿ ಬೆಳೆಯುವ ಸಾಮರ್ಥ್ಯವನ್ನು 15ರಿಂದ 20 ಲಕ್ಷ ಎಕರೆ ಭೂಮಿಗೆ ವಿಸ್ತರಿಸುವ ಗುರಿಯನ್ನು ಹೊಂದಿದೆ. ಈ ಮೂಲಕ ಸುಮಾರು 80 ಲಕ್ಷ ಎಕರೆ ಭೂಮಿ ತೆಲಂಗಾಣದಲ್ಲಿ ಹತ್ತಿ ಬೆಳೆಯುವ ಪ್ರದೇಶ ವಾಗಲಿದೆ. ಹತ್ತಿ ಬೆಳೆಯುವ ಬಗ್ಗೆ ಬಹಳಷ್ಟು ಪ್ರಾಧಾನ್ಯ ನೀಡಿದ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಈಗ ಗೆಲುವಿನ ನಗುವನ್ನು ಬೀರಿದ್ದಾರೆ. ರಾಜ್ಯದಲ್ಲಿ ಹೆಚ್ಚಾಗಿ ರೆಡ್ ಗ್ರಾಂ ಹತ್ತಿ ಬೆಳೆಯಲು ಉತ್ತೇಜನ ನೀಡಲಾಗುತ್ತಿದೆ. ಸುಮಾರು 25 ಲಕ್ಷ ಎಕರೆ ಭೂಮಿ ರೆಡ್ ಗ್ರಂ ಹತ್ತಿ ಬೆಳೆಯುವ ಪ್ರದೇಶಕ್ಕೆ ಒಳಪಟ್ಟಿದೆ.


ಈ ಮೊದಲು ಗುಜರಾತ್ 56 ಎಕ್ರೆ ಭೂಮಿಯನ್ನು ತನ್ನ ಹತ್ತಿ ಬೆಳೆಯುವ ಪ್ರದೇಶವನ್ನಾಗಿ ಮಾರ್ಪಡಿಸಿತು. ಆದರೆ ಈಗ ಆದನ್ನು ಮೀರಿನಿಂತ ತೆಲಂಗಾಣ ರಾಜ್ಯ ದೇಶದಲ್ಲಿ ಅತಿ ಹೆಚ್ಚು ಹತ್ತಿ ಬೆಳೆಯುವ ಎರಡನೇ ಪ್ರದೇಶ ಎಂಬ ಹಿರಿಮೆಗೆ ಪಾತ್ರವಾಗಿದೆ. ದೇಶದಲ್ಲಿ ಮಹಾರಾಷ್ಟ್ರ ಒಟ್ಟು ಒಂದು ಕೋಟಿ ಎಕ್ರೆ ಪ್ರದೇಶದಲ್ಲಿ ಹತ್ತಿ ಬೆಳೆಯುತ್ತಿದ್ದು, ದೇಶದಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ.

  • ನ್ಯೂಸ್ ಬ್ಯೂರೋ ಟ್ರೂ ನ್ಯೂಸ್ ಕನ್ನಡ

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.