ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಫಾ ಅಲರ್ಟ್ ..! ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ ವಿ ಸಾರ್ವಜನಿಕರಲ್ಲಿ ಮನವಿ..!?

ದಕ್ಷಿಣ ಕನ್ನಡ: ಕೇರಳದಲ್ಲಿ ನಿಫಾ ವೈರಸ್ ಪತ್ತೆಯಾಗಿರುವ ಹಿನ್ನೆಲೆ ಗಡಿಭಾಗದಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಫಾ ಅಲರ್ಟ್ ಘೋಷಿಸಲಾಗಿದೆ. ಕೇರಳದ ಕೊಯಿಕ್ಕೋಡ್​ನಲ್ಲಿ 12ರ ಬಾಲಕ ನಿಫಾ ವೈರಸ್ ರೋಗದಿಂದ ಸಾವನ್ನಪ್ಪಿದ್ದ. ಈ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆ ಕೇರಳದ ಗಡಿಭಾಗದಲ್ಲಿರುವುದರಿಂದ ಅಲರ್ಟ್ ಘೋಷಿಸಲಾಗಿದೆ. ಜಿಲ್ಲೆಯಲ್ಲಿ ಕಟ್ಟೆಚ್ಚರವಹಿಸುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ ವಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಸೋಂಕು ಹರಡುವ ಪ್ರಾಣಿಗಳಾದ ಬಾವಲಿ, ಹಂದಿಗಳಿಂದ ದೂರವಿರಬೇಕು. ಪ್ರಾಣಿ-ಪಕ್ಷಿಗಳು ತಿಂದು ಬಿಟ್ಟಿರುವಂತಹ ಹಣ್ಣು-ಹಂಪಲುಗಳನ್ನು ಸೇವಿಸಬಾರದು. ಸೋಂಕಿತ ವ್ಯಕ್ತಿಯ ದೇಹ ದ್ರವಗಳಿಂದ ರೋಗ ಹರಡುವ ಸಂಭವವಿರುವುದರಿಂದ ಎಚ್ಚರಿಕೆವಹಿಸಬೇಕು. ನಿಫಾ ಶಂಕಿತ ಪ್ರದೇಶಗಳಿಂದ ಬರುವ ಜ್ವರದ ಪ್ರಕರಣಗಳನ್ನು ನಿಫಾ ವೈರಸ್ ಪ್ರಕರಣ ಎಂದು ತಿಳಿದುಕೊಂಡು ಅವರನ್ನು ಪ್ರತ್ಯೇಕಿಸುವುದು ಸೇರಿದಂತೆ ಸಂಕಿತ ಪ್ರಕರಣ ಕಂಡು ಬಂದ ತಕ್ಷಣ ಆರೋಗ್ಯ ಇಲಾಖೆಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.