ದೇಶದಲ್ಲಿ ಸ್ಥಾಪನೆಯಾಗಲಿರುವ 172 ಕ್ರೀಡಾ ಯುನಿಟ್ ಗಳಲ್ಲಿ ಕೊಡಗಿನ ಪೊನ್ನಂಪೇಟೆ ಗೆ ಸ್ಥಾನ!!

ಪೊನ್ನಂಪೇಟೆ:  ಇದೀಗ ಕೇಂದ್ರ ಸರಕಾರ ರಾಷ್ಟ್ರೀಯ ಕ್ರೀಡಾಪಟುಗಳ ಹುಡುಕಾಟ ಹಾಗು ತಯಾರಿಗೆ ಭಾರತದ ಸುಮಾರು 172 ಜಿಲ್ಲೆಗಳನ್ನು ಆಯ್ಕೆ ಮಾಡಿ‌ 'ಕೇಲೋ ಇಂಡಿಯಾ' ಎನ್ನುವ ವಿನೂತನ ಕ್ರೀಡಾ ಯೋಜನೆಯನ್ನು ಅನುಷ್ಠಾನ ಮಾಡಲು, ಅಧಿಕೃತ ಚಾಲನೆ ನೀಡಿದೆ. ಈ ಯೋಜನೆಯಂತೆ ಕರ್ನಾಟಕದ ಮೂವತ್ತೊಂದು ಜಿಲ್ಲೆಯಲ್ಲೂ ಪ್ರತಿ ಜಿಲ್ಲೆಗೆ, ಆಯಾ ಜಿಲ್ಲೆಯ ಕ್ರೀಡಾಸಕ್ತಿ‌ಗೆ ಅನುಸಾರ ಒಂದೊಂದು ಯೂನಿಟ್ ಅನ್ನು ಸ್ಥಾಪಿಸುವಂತೆ ಕೇಂದ್ರ ಕ್ರೀಡಾ ಮಂತ್ರಿ 'ಕಿರಣ್ ರಜು' ಅವರು ಹಾಗು ಕೇಲೋ ಇಂಡಿಯಾದ ಮುಖ್ಯ ನಿರ್ದೇಶಕ ಸತ್ಯನಾರಾಯಣ ಮೀನಾ ಅವರು ಅಧಿಕೃತ ಆದೇಶ ಪತ್ರವನ್ನು ರವಾನಿಸಿದ್ದಾರೆ.

ಇದರ ಗುರಿ   ಒಲಂಪಿಕ್ ಆಗಿದ್ದು. ದೇಶದಿಂದ ಕ್ರೀಡಾಪಟುಗಳನ್ನು ಹೆಕ್ಕಿ, ತಯಾರಿಸಿ ಚಿನ್ನ ತರಲು ತಯಾರಿಸಿ, ಸಜ್ಜುಮಾಡಿ ಕಳುಹಿಸುವಲ್ಲಿ ಈ ಯೋಜನೆ ಬಹುಮುಖ್ಯ ‌ಪಾತ್ರ ವಹಿಸಲಿದೆ.

 ಆಯಾ ಜಿಲ್ಲೆಯ ಕ್ರೀಡಾ ಆಸಕ್ತಿ ಅನುಸಾರ 'ಕೇಲೋ‌ ಇಂಡಿಯ' ಆಯ್ಕೆ ಮಾಡಲಾಗಿರುವ ಪ್ರತಿ ಜಿಲ್ಲೆಯಲ್ಲೂ ಒಂದೊಂದು ಘಟಕ‌ ಸ್ಥಾಪಿಸುವ ಕೆಲಸ ಶುರುಮಾಡಿಕೊಂಡಿದೆ. ಇದರಂತೆ ಕೊಡಗಿನ ಸಾಂಪ್ರದಾಯಿಕ ಕ್ರೀಡೆ ಹಾಕಿಯನ್ನು ಈ‌ ಯೋಜನೆ‌  ಆಯ್ಕೆಮಾಡಿದ್ದು. ಕೊಡಗಿನ ನೂತನ ತಾಲೂಕು ಪೊನ್ನಂಪೇಟೆಯಲ್ಲಿ ಘಟಕ‌ ಸ್ಥಾಪಿಸುವಂತೆ ಆದೇಶ ಹೊರಡಿಸಲಾಗಿದೆ.

ಮುಂಬರುವ ದಿನಗಳಲ್ಲಿ ಪ್ರತಿಷ್ಠಿತ 'ಸಾಯಿ ಕ್ರೀಡಾ ತರಬೇತು' ಶಿಬಿರ ಒಳಗೊಂಡಂತೆ ಅಂತರಾಷ್ಟ್ರೀಯ ಮಟ್ಟದ ಕ್ರೀಡಾ ವಸತಿ ಗೃಹಗಳು ಕೇಲೋ ಇಂಡಿಯಾ ಯೋಜನೆಗೆ ಜಂಟಿಯಾಗಲಿದ್ದು.‌ ಭಾರತಕ್ಕೆ ಒಲಂಪಿಕ್ಸ್ ಕ್ರೀಡೆಯಲ್ಲಿ ಮತ್ತಷ್ಟು ಪುಷ್ಟಿದೊರಕುವ  ಜೀವತಾಳಿದೆ.

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.