ಚಂದನ್ ಶೆಟ್ಟಿ ನಿವೇದಿತಾ ಗೌಡ ಅವರ ಮದುವೆ ದಿನಾಂಕ ಫಿಕ್ಸ್…

ಮೂರೇ ಮೂರು ಪೆಗ್ಗಿಗೇ ತಲೆ ಗಿರಗಿರಗಿರ ಅಂತಿದೆ… ನನ ಕಣ್ಣುಗಳು ಬೆಂಡಾಗಿವೆ ಬಾಡಿ ಬ್ಯಾಲೆನ್ಸ್ ತಪ್ಪಿದೆ.  ಏನಿದು ಫುಲ್ ಸಾಂಗ್ ಸ್ಕ್ರಿಪ್ಟ್ ಅಲ್ಲಿ ಇದೆ ಅಂತ ಅನ್ಕೋಬೇಡಿ. ಈ ಸಾಂಗ್ ಬರೆದುದ್ದರ ಹಿಂದೆ ಒಂದು ಗುಡ್ ನ್ಯೂಸ್ ಇದೆ. ಈ ಸಾಂಗ್ ಹಾಡಿದ ಕನ್ನಡ ರ್ಯಾಪರ್ ಹಾಗೂ ಬಿಗ್​ ಬಾಸ್​ ಐದನೇ ಆವೃತ್ತಿ ವಿಜೇತ ಚಂದನ್​ ಶೆಟ್ಟಿ ಅವರು ಮೆಚ್ಚಿದ ಗೊಂಬೆ ನಿವೇದಿತಾ ಗೌಡ ಅವರೊಂದಿಗೆ ಮದುವೆ ಡೇಟ್ ಫಿಕ್ಸ್ ಆಗಿದೆ.

ಹೌದು… ಕಳೆದ ವರ್ಷ ಅಕ್ಟೋಬರ್ 21 ರಂದು ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರ ಮದುವೆ ನಿಶ್ಚಿತಾರ್ಥ ಮೈಸೂರಿನ ಖಾಸಗಿ ಹೊಟೇಲ್ ನಲ್ಲಿ ನೆರವೇರಿತು. ತುಂಬಾ ಅದ್ದೂರಿಯಾಗಿ ನಿಶ್ಚಿತಾರ್ಥ ನೆರೆವೇರಿಸಿಕೊಂಡಿದ್ದ ಈ ಜೋಡಿ ಅಸಮಣೆ ಏರಲು ಸಿದ್ದವಾಗಿದೆ.

ಇತ್ತೀಚೆಗೆ ಸಂದರ್ಶನವೊಂದಲ್ಲಿ ಮಾತನಾಡಿದ ನಿವೇದಿತಾ ಗೌಡ ತಮ್ಮ ಮದುವೆ ದಿನಾಂಕವನ್ನು ಅಧಿಕೃತವಾಗಿ ತಿಳಿಸಿದ್ದಾರೆ. ಚಂದನ್ ಹಾಗೂ ನಿವೇದಿತಾ ಮುಂದಿನ ತಿಂಗಳು ಫೆಬ್ರವರಿ 25 ಮತ್ತು 26 ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಇವರ ಮದುವೆ ಮೈಸೂರಿನ ಕನ್ವೆನ್ಶನ್ ಹಾಲ್‍ನಲ್ಲಿ ನಡೆಯಲಿದೆ. ಹೀಗಾಗಿ ಈಗಿನಿಂದಲೇ ಎರಡು ಮನೆಯವರು ಮದುವೆಯ ತಯಾರಿ ನಡೆಸುತ್ತಿದ್ದಾರೆ.

 

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.