ಚಿತ್ರಮಂದಿರ ತೆರೆಯಲು ಕೇಂದ್ರ ಸರ್ಕಾರದಿಂದ ಗ್ರೀನ್ ಸಿಗ್ನಲ್..!?

theater re open

ನವದೆಹಲಿ: ಕೊರೋನ ನಿಮಿತ್ತ ಹೇರಲಾಗಿದ್ದ ಲಾಕ್‌ಡೌನ್ ಹಂತ ಹಂತವಾಗಿ ಅನ್‌ಲಾಕ್ ಆಗಿದ್ದರೂ, ಸುಮಾರು 6 ತಿಂಗಳಿಂದ ಕ್ಲೋಸ್ ಆಗಿದ್ದ ಚಿತ್ರಮಂದಿರಗಳನ್ನು ಮಾತ್ರ ತೆರೆಯಲು ಸರ್ಕಾರ ಅನುಮತಿ ನೀಡಿರಲಿಲ್ಲ. ಆದರೆ ದೇವಾಲಯ, ಬೀಚ್‌ಗಳಲ್ಲಿ ಜನರು ಗುಂಪುಗುಂಪಾಗಿ ಸೇರಲು ಮತ್ತೆ ಆರಂಭಿಸಿದ್ದರೂ ಚಿತ್ರಮಂದಿರವನ್ನೇಕೆ ತೆರೆಯಲು ಸರ್ಕಾರ ಹಿಂದೇಟು ಹಾಕುತ್ತಿದೆ ಎಂದು ಬೇಸೆತ್ತಿದ್ದ ಸಿನಿಪ್ರಿಯರಿಗೊಂದು ಶುಭ ಸುದ್ದಿ ಬಂದಿದೆ.

theater re openeing


ಹೌದು, ದೇಶದಾದ್ಯಂತ  ಚಿತ್ರಮಂದಿರಗಳು ಮತ್ತೆ ಬಾಗಿಲು ತೆರೆಯುವ ಕಾಲ ಸನಿಹದಲ್ಲಿದೆ. ಥಿಯೇಟರ್ ರೀ ಓಪನ್ ಮಾಡಲು ಕೇಂದ್ರ ಗೃಹ ಸಚಿವ ಅಮಿತ್ ಷಾ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಗುಬ್ಬಿ ಜಯರಾಜ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಅಕ್ಟೋಬರ್ 1 ರಿಂದ ಚಿತ್ರಮಂದಿರಗಳನ್ನು ತೆರೆಯಲು ಕೇಂದ್ರ ಸರ್ಕಾರ ಅಸ್ತು ಎಂದಿದೆ ಎನ್ನಲಾಗಿದೆ.

theater re openeing

ಚಿತ್ರಮಂದಿರ ತೆರೆಯುವ ಬಗ್ಗೆ ಕೇಂದ್ರವು ಶೀಘ್ರದಲ್ಲಿ ಗೈಡ್ ಲೈನ್ಸ್ ಹೊರಡಿಸಲಿದ್ದು, ಅದರಂತೆ ಸಾಮಾಜಿಕ ಅಂತರವನ್ನು ಕಾಯ್ದುಕ್ಕೊಳ್ಳುವುದು, ಖಡ್ಡಾಯ ಮಾಸ್ಕ್ ಧಾರಣೆ, ಥಿಯೇಟರ್ ಪ್ರವೇಶಿಸುವ ವೇಳೆ ಸ್ಯಾನಿಟೈಸರ್ ಬಳಕೆ ಇತ್ಯಾದಿ ಅಂಶಗಳು ಗೈಡ್‌ಲೈನ್ಸ್ನಲ್ಲಿ ಇರಲಿವೆ ಮತ್ತು ಚಿತ್ರಮಂದಿರದ ಆಸನಗಳನ್ನು ಸಾಮಾಜಿಕ ಅಂತರಕ್ಕನುಗುಣವಾಗಿ ಮಾರ್ಪಾಡುಗೊಳಿಸಲಾಗುತ್ತಿದೆ ಎನ್ನಲಾಗುತ್ತಿದೆ.

theater re openeing
  • ಫಿಲ್ಮ್ ಬ್ಯೂರೋ, ಟ್ರೂನ್ಯೂಸ್ ಕನ್ನಡ
     

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.