ಚೈನೀಸ್ ಆಹಾರವೆಂದರೆ ಅದು ಪ್ರತಿಯೊಬ್ಬರಿಗೂ ಇಷ್ಟವಾಗುವುದು. ಕೆಲವರಿಗೆ ಚಿಕನ್ ಮಂಚೂರಿಯನ್ ಎಂದರೆ ಬಲು ಪ್ರಿಯ. ಇದನ್ನು ಹೋಟೆಲ್ ನಲ್ಲಿ ಸವಿಯುವುದಕ್ಕಿಂತಲೂ ಮನೆಯಲ್ಲೇ ತಯಾರಿಸಿಕೊಂಡು ತಿಂದರೆ ತುಂಬಾ ಒಳ್ಳೆಯದು. ಅದು ಹೇಗೆ ಎಂದು ತಿಳಿಯಿರಿ.
ಬೇಕಾಗುವ ಸಾಮಗ್ರಿಗಳು
- 400 ಗ್ರಾಂ ಚಿಕನ್ ಬೋನ್ ಲೆಸ್
- 1 ಮೊಟ್ಟೆ
- 1 ಚಮಚ ಜೋಳದ ಹಿಟ್ಟು(ಕಾರ್ನ್ ಫ್ಲೋರ್)
- ಉಪ್ಪು
- 2 ಚಮಚ ಸಾಯ ಸಾಸ್
- 1 ಚಮಚ ರೆಡ್ ಚಿಲ್ಲಿ ಸಾಸ್
- 1 ಚಮಚ ಟೊಮೆಟೊ ಕೆಚಪ್
- 2 ಚಮಚ ಎಳ್ಳೆಣ್ಣೆ
- ಸೂರ್ಯಕಾಂತಿ ಎಣ್ಣೆ(ಕರಿಯಲು)
- 2 ಚಮಚ ಶುಂಠಿ ಹಚ್ಚಿರುವುದು
- 8 ಎಸಲು ಬೆಳ್ಳುಳ್ಳಿ
- 1 ಈರುಳ್ಳಿ ಕತ್ತರಿಸಿರುವುದು
- 2 ಹಸಿ ಮೆಣಸು
- 1 ಚಮಚ ವಿನೇಗರ್
- 2 ಸ್ಪ್ರಿಂಗ್ ಓನಿಯನ್ ಕತ್ತರಿಸಿಕೊಂಡಿರುವುದು
ತಯಾರಿಸುವ ವಿಧಾನ
- ಮಂಚೂರಿಯನ್ ತಯಾರಿಸಿಕೊಳ್ಳಲು ಮೊದಲಿಗೆ ಮೊಟ್ಟೆ, ಹಿಟ್ಟು, ಉಪ್ಪು ಮತ್ತು ಒಂದು ಚಮಚ ಸೋಯಾ ಸಾಸ್ ನ್ನು ಸರಿಯಾಗಿ ಮಿಶ್ರಣ ಮಾಡಿ. ಇದಕ್ಕೆ ಚಿಕನ್ ತುಂಡುಗಳನ್ನು ಹಾಕಿಕೊಂಡು ಮತ್ತೆ ಸರಿಯಾಗಿ ಮಿಶ್ರಣ ಮಾಡಿ. ಇದರ ಬಳಿಕ ಬದಿಗಿಟ್ಟು 30 ನಿಮಿಷ ಮ್ಯಾರಿನೇಟ್ ಮಾಡಿ.
- ದೊಡ್ಡ ಬೆಂಕಿಯಲ್ಲಿ ಎಣ್ಣೆ ಬಿಸಿ ಮಾಡಿ ಮತ್ತು ಮ್ಯಾರಿನೇಟ್ ಮಾಡಿರುವಂತಹ ಚಿಕನ್ ತುಂಡುಗಳನ್ನು ಹಾಗೆ ಬಂಗಾರ ಬಣ್ಣ ಬರುವ ತನಕ ಕರಿಯಿರಿ. 3-4 ನಿಮಿಷ ಕಾಲ ನೀವು ಇದಕ್ಕಾಗಿ ಬಳಸಬಹುದು.
- ಮಧ್ಯಮ ಬೆಂಕಿಯಲ್ಲಿ ಒಂದು ಸಣ್ಣ ಬಾಣಲೆಗೆ ಎಳ್ಳೆಣ್ಣೆ, ಬೆಳ್ಳುಳ್ಳಿ ಹಾಕಿ ಹುರಿಯಿರಿ.
- ಇದಕ್ಕೆ ಶುಂಠಿ ಮತ್ತು ಹಸಿ ಮೆಣಸು ಹಾಕಿ ಮತ್ತೆ 30 ಸೆಕೆಂಡು ಕಾಲ ಹುರಿಯಿರಿ. ಕತ್ತರಿಸಿರುವ ಈರುಳ್ಳಿ ಕೂಡ ಹಾಕಿ ಮತ್ತು ಅದನ್ನು ಹುರಿಯಿರಿ.
- ಉಳಿದ ಸೋಯಾ ಸಾಸ್, ಚಿಲ್ಲಿ ಸಾಸ್, ಟೊಮೆಟೊ ಕೆಚಪ್, ವಿನೇಗರ್ ನ್ನು ಹಾಕಿ ಕೆಲವು ನಿಮಿಷ ಹಾಲ ಹುರಿಯಿರಿ. ಇದಕ್ಕೆ ಟೇಸ್ಟಿಂಗ್ ಹುಡಿ ಕೂಡ ಹಾಕಬಹುದು.
- ಅಂತಿಮವಾಗಿ ಚಿಕನ್ ತುಂಡುಗಳನ್ನು ಇದಕ್ಕೆ ಹಾಕಿಕೊಂಡು 4-5 ನಿಮಿಷ ಕಾಲ ಹಾಗೆ ಮಿಶ್ರಣ ಮಾಡಿಕೊಳ್ಳಿ.
- ಬೆಂಕಿಯಿಂದ ತೆಗೆದ ಬಳಿಕ ಅದನ್ನು ಕತ್ತರಿಸಿಕೊಂಡು ಸ್ಪ್ರಿಂಗ್ ಓನಿಯನ್ ಹಾಕಿ ಮತ್ತು ಈಗ ಇದು ತಿನ್ನಲು ತಯಾರಾಗಿದೆ.