ಬಂಟ್ವಾಳ ಹೈ ವೋಲ್ಟೇಜ್ ವಿಧಾನಸಭಾ ಕ್ಷೇತ್ರ; ಕಾಂಗ್ರೆಸ್ ಗೆ ಎಸ್​ಡಿಪಿಐ ಸಮಸ್ಯೆ ..!?

ಬಂಟ್ವಾಳ :  ಕರ್ನಾಟಕ ವಿಧಾನಸಭಾ ಚುನಾವಣೆಗೆ ತಿಂಗಳು ಉಳಿದಿವೆ. ಹೀಗಿರುವಾಗ ಎಚ್ಚೆತ್ತುಕೊಂಡಿರುವ ಆಡಳಿತ ಹಾಗೂ ವಿರೋಧ ಪಕ್ಷಗಳು ಮತದಾರನ ವಿಶ್ವಾಸ ಗಳಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದಾರೆ. ಹೀಗಿರುವಾಗ ಕರ್ನಾಟಕ ವಿಧಾನಸಭಾ ಚುನಾವಣೆಯ ಹೈ ವೋಲ್ಟೇಜ್ ವಿಧಾನಸಭಾ ಕ್ಷೇತ್ರಗಳಲ್ಲೊಂದಾದ  ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಕ್ಷೇತ್ರ. 

ಬಂಟ್ವಾಳ ರಾಜ್ಯದ ಕೋಮು ಸೂಕ್ಷ್ಮ ಪ್ರದೇಶಗಳಲ್ಲೊಂದು. ಆರ್​ಎಸ್​ಎಸ್​ ಎಂದಾಗ ತಕ್ಷಣಕ್ಕೇ ನೆನಪಾಗುವ ಕಲ್ಲಡ್ಕ ಪ್ರಭಾಕರ ಭಟ್ಟರ ಪ್ರಭಾವವಿರುವ ಈ ಕ್ಷೇತ್ರವನ್ನು ಹಿಂದುತ್ವ ಸಾಮ್ರಾಜ್ಯದ ರಾಜಧಾನಿ ಎಂದೇ ಪರಿಗಣಿಸಲಾಗಿದೆ. ಸಾಮಾನ್ಯವಾಗಿ ಹಿಂದೂ ಹಾಗೂ ಮುಸಲ್ಮಾನರು ಸೌಹಾರ್ದತೆಯಿಂದ ಬಾಳುವ ಈ ಪ್ರದೇಶದಲ್ಲಿ, ಕೊಂಚ ಅನುಮಾನಾಸ್ಪದ ವಿಚಾರ ನಡೆದರೂ ಅಥವಾ ಸಂಶಯ ಹುಟ್ಟಿಕೊಂಡರೂ ಇದು ಕೋಮುರೂಪ ಪಡೆದು ಧರ್ಮಗಳ ನಡುವಿನ ಕಾಳಗಕ್ಕೆ ಸಾಕ್ಷಿಯಾಗುತ್ತದೆ. 

ಬಂಟ್ವಾಳ ಮೊದಲಿನಿಂದಲು ಬಂಟ(ಶೆಟ್ಟಿ) ಸಮುದಾಯದ ಬಿಗಿ ಹಿಡಿತದಲ್ಲೇ ಇದೆ. ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳಿಂದ ಬಂಟ ಸಮುದಾಯ ಅಭ್ಯರ್ಥಿಗಳೇ ನಿರಂತರವಾಗಿ ಸ್ಪರ್ಧಿಸುತ್ತಾ ಬಂದಿರುವುದೇ ಇದಕ್ಕೆ ಸಾಕ್ಷಿ. 

ಆರು ಬಾರಿ ಗೆದ್ದಿರುವ ರಮಾನಾಥ್ ರೈಗಳಿಗೆ ಕಾಂಗ್ರೆಸ್‌ನಲ್ಲಿ ಪ್ರತಿಸ್ಪರ್ಧಿಗಳಿಲ್ಲ. ಕರಾವಳಿಯ ಪ್ರಮುಖ ರಾಜಕಾರಣಿಗಳಲ್ಲಿ ಗುರುತಿಸಿಕೊಂಡಿರುವ ರಮಾನಾಥ್ ರೈ. ಸಚಿವರಾಗಿಯೂ ಸೇವೆ ಸಲ್ಲಿಸಿರುವ ರೈ ಬಂಟ್ವಾಳ ಕ್ಷೇತ್ರದಿಂದ ಬರೋಬ್ಬರಿ ಆರು ಬಾರಿ ಗೆದ್ದಿದ್ದಾರೆ. ಕಳೆದ ಬಾರಿ ಸೋತಿದ್ದರೂ ಕ್ಷೇತ್ರದ ಜನರೊಂದಿಗೆ ಅವರ ಒಡನಾಟ ಮುಂದುವರೆದಿದೆ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಮತ್ತೆ  ಕಾಂಗ್ರೆಸ್ ಹಳೆ ಹುಲಿ ರಮಾನಾಥ ರೈ.

 

 • ಜಾತಿ ಲೆಕ್ಕಾಚಾರ
 • ಒಟ್ಟು ಮತದಾರರು
 • 2,21,735
 • ಮುಸ್ಲಿಂ
 • 40,000
 • ಬಿಲ್ಲವ
 • 35,000
 • ಬಂಟ್ಸ್
 • 25,000
 • ಜಿಎಸ್​ಬಿ
 • 15,000
 • ಕುಲಾಲ್
 • 8,000
 • ಎಸ್​ಸಿ/ಎಸ್​ಟಿ
 • 6,000
 • ಬ್ರಾಹ್ಮಣ
 • 5,000

ಈ ಕ್ಷೇತ್ರದಲ್ಲಿ ಎಸ್​ಡಿಪಿಐ ಪ್ರಬಲವಾಗಿದೆ. ಈ ಪಕ್ಷದಿಂದ ರಮಾನಾಥ ರೈ ಅವರಿಗೆ ಸಮಸ್ಯೆ ತರುತ್ತದೆ ಎಂಬುವುದರಲ್ಲಿ ಅನುಮಾನವಿಲ್ಲ. ಸ್ಪರ್ಧಿಸದಿದ್ದರೆ ಬಿಜೆಪಿ ಅಭ್ಯರ್ಥಿಗೆ ಸಮಸ್ಯೆಯುಂಟು ಮಾಡುತ್ತದೆ . ಈ ಕಾರಣಕ್ಕಾಗಿ ಎಸ್​ಡಿಪಿಐ ಬಹಳ ಮಹತ್ವದ್ದಾಗಿದೆ. 

Add new comment

Restricted HTML

 • You can align images (data-align="center"), but also videos, blockquotes, and so on.
 • You can caption images (data-caption="Text"), but also videos, blockquotes, and so on.