ಬಿಜೆಪಿ ಲೆಕ್ಕಾಚಾರಕ್ಕೆ ಉಲ್ಟಾ ಹೊಡೆದ ಜನ..!? ಬಿಜೆಪಿಯ ವಿರುದ್ಧ ತಿರುಗಿಬಿದ್ರ ಜನರು..!?

ದಕ್ಷಿಣ ಕನ್ನಡ : ಪ್ರಜ್ಞಾವಂತ ನಾಗರಿಕರೆಂದು ಬಿಂಬಿತವಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಜನರು ಪ್ರತಿ ವಿಷಯವನ್ನು ಸೂಕ್ಷ್ಮವಾಗಿ ಗಮನಿಸಿ.. ತಮ್ಮ ತಮ್ಮಲ್ಲಿಯೇ ಚರ್ಚೆ ಮಾಡುತ್ತಿರುತ್ತಾರೆ. ಹಾಗಾಗಿ ಈ ಕೊರೋನ ಕುರಿತಾದ ಅನುಮಾನಗಳ ಚರ್ಚೆಯಲ್ಲಿ ಜನರ ಬಾಯಿಂದ ಕೇಳಿ ಬರುವ ಉತ್ತರ “ಮೆಡಿಕಲ್ ಮಾಫಿಯಾ..! 

ಕಿತ್ತು ತಿನ್ನುತ್ತಿರುವ ಆರೋಗ್ಯ ವ್ಯವಸ್ಥೆ ಶ್ರೀಮಂತರಿಗೆ ಬಿಡಿ ಮಧ್ಯಮ ವರ್ಗದಿಂದ ಕೆಳ ವರ್ಗದ ಬಡವನವರೆಗೂ ಕೊರೋನ ಎನ್ನುವ ಮೂರಕ್ಷರದ ಈ ಪದ ಅಕ್ಷರಷಃ ಕೆಲವರಿಗೆ ವರದಾನವಾಗಿದೆ. ಮತ್ತು ಕೆಲವರಿಗೆ ಶಾಪವಾಗಿ ಪರಿಣಮಿಸಿದೆ. 

ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಯಾವ ರೋಗಿಗಳು ದಾಖಲಾದರೂ ಅವರಿಗೆಲ್ಲ ಕೊರೋನ ಪಾಸಿಟಿವ್ವೇ ಬರುವುದು ಹೇಗೆ...? ಇಂತಹ ಹತ್ತು ಹಲವು ವಿಚಾರಗಳು ಸೋಷಿಯಲ್ ಮೀಡಿಯಾಗಳಲ್ಲಿ ವ್ಯಾಪಕವಾಗಿ ಸದ್ದು ಮಾಡುತ್ತಿದೆ. ಸಾಮಾನ್ಯ ಜನರಿಗೆ ಇಷ್ಟೆಲ್ಲಾ ಯಕ್ಷ ಪ್ರಶ್ನೆಗಳು ಮೂಡಿದಾಗ, ಈ ಎಲ್ಲಾ ಪ್ರಕರಣಗಳನ್ನು ಹತ್ತಿರದಿಂದ ಗಮನಿಸುತ್ತಿರುಯವ ಮಾದ್ಯಮಗಳು ಇದಕ್ಕೆ ಉತ್ತರ ಹುಡುಕುತ್ತಲೇ ಇವೆ. ಸತ್ಯ ಮಿಥ್ಯಗಳ ಮಧ್ಯೆ ಕೊರೋನ ಒಂದು ಕಗ್ಗಂಟಾಗಿ ಉಳಿದಿದೆ. ಇನ್ನು ನಿರ್ಗತಿಕರು ಮತ್ತು ಬಡವರ ಮಾತು ಕೇಳೋದಾದ್ರೆ, ಅವರ ಚರ್ಚೆಯ ವಿಚಾರವೆ ಬೇರೆ ಇದೆ.

 

ಒಟ್ಟಾರೆ ಆರೋಗ್ಯ ವ್ಯವಸ್ಥೆಯ ಕೊಂಡಿಯ ರೂಪದಲ್ಲಿ ಸಂಪರ್ಕಿಸುವ ಮೆಡಿಕಲ್‌ಗಳು, ಟೆಸ್ಟಿಂಗ್ ಲ್ಯಾಬ್‌ಗಳು, ಆಂಬುಲೆನ್ಸ್ ಇತ್ಯಾದಿಗಳು ಹಣ ಲೂಟಿ ಮಾಡುವ ಮಾಫಿಯದಲ್ಲಿ ಸಮಭಾಗಿಯಾಗಿವೆಯಾ ಎನ್ನುವ ಪ್ರಶ್ನೆಗೆ..? ಕಾಳಜಿ ಇರುವ ಜನಪ್ರತಿನಿಧಿಗಳು ಹಾಗು ಅಧಿಕಾರಿ ವರ್ಗದವರ ಉತ್ತರಕ್ಕಾಗಿ ಕಾಯುತ್ತಿದ್ದಾರೆ ಸಾರ್ವಜನಿಕರು.

 

  • ಸರ್ಕಾರಕ್ಕೆ ಜನರ ಟಫ್ ಆನ್ಸರ್:  

  • ಕರ್ನಾಟಕ ಸರ್ಕಾರ ತಮ್ಮ ಅನುಕೂಲಕ್ಕಾಗಿ ಜನರನ್ನು ಬಲಿಪಶು ಮಾಡುವುದು ಬೇಡ. ನಿಮಗೆ ಬೇಕಾದಾಗ ಲಾಕ್‌ಡೌನ್, ಬೇಡದಿದ್ದಾಗ ಅನ್‌ಲಾಕ್ ಮಾಡುವುದು ಬೇಡ.  ರಾಜಕೀಯ ಲಾಭಕ್ಕಾಗಿ ಜನರ ಮೇಲೆ ಕಷ್ಟಗಳನ್ನು ಹೇರಬೇಡಿ. ಬೀದಿ ವ್ಯಾಪಾರ ಮಾಡುವವರರನ್ನು ಬಿಜೆಪಿ ಸರ್ಕಾರ ಕೊಲೆ ಮಾಡುತ್ತಿದೆ. 

  • ಒಂದು ವಿಚಾರದಲ್ಲಿ ಬಹಳ ಸಂಕಟವಾಗುತ್ತಿದೆ. ಈಗಾಗಲೇ ಜನ ಸಂಕಷ್ಟಕ್ಕೆ ಸಿಕ್ಕಿದ್ದಾರೆ. ವ್ಯಾಪಾರಿಗಳು, ಕೈಗಾರಿಕೋದ್ಯಮಿಗಳು, ಕಾರ್ಮಿಕರು ಒದ್ದಾಡುತ್ತಿದ್ದಾರೆ. ಅವರ ಮೇಲೆ ಅನಗತ್ಯವಾಗಿ ಮತ್ತೆ ಲಾಕ್ ಡೌನ್ ಹೇರುವುದು ಎಷ್ಟರ ಮಟ್ಟಿಗೆ ಸರಿ..?

  • ಕೂಲಿ ಮಾಡುವವರು, ಫ್ಯಾಕ್ಟರಿಗೆ ಹೋಗುವವರು ಸಾಕಷ್ಟಿದ್ದಾರೆ. 10 ಜನರಲ್ಲಿ 5 ಜನರನ್ನಷ್ಟೆ ಕೆಲಸಕ್ಕೆ ಕರೆಸಿಕೊಳ್ಳುತ್ತಾರೆ ಉಳಿದವರ ಕತೆ ಏನು..? ಅವರನ್ನು ಸಾಕುವುದು ಯಾರು..? ನಾವು ಅದು ಕೊಟ್ಟೆವು, ಇದು ಕೊಟ್ಟೆವು ಎಂದು ಸರ್ಕಾರಗಳು ಹೇಳುತ್ತಿವೆ, ಅದರಲ್ಲಿ 50% ಹೋಗಿದೆ, ಇನ್ನುಳಿದದ್ದು ತಲುಪಿಯೇ ಇಲ್ಲ..! ಜನರಿಗೂ ಗೊತ್ತಿದೆ ಯಾರಿಗೆ ಎಷ್ಟು ಅನ್ಯಾಯ ಆಗಿದೆ ಎಂದು.

ಯಾವ ಸರ್ಕಾರದ ಪರವೂ ಅಲ್ಲ. ಯಾವ ಸರ್ಕಾರವನ್ನು ಟೀಕೆ ಮಾಡುತ್ತಿಲ್ಲ, ಯಾವ ಪಕ್ಷದ ಪರವಾಗಿಯೂ ಇಲ್ಲ. ನಾನು ಜನಸಾಮಾನ್ಯರ ಪರವಾಗಿ ಅಷ್ಟೆ ಮಾತನಾಡುತ್ತಿದ್ದೇನೆ. ಸರ್ಕಾರಕ್ಕೆ ಮನವಿ ಇಷ್ಟೆ. ದಯವಿಟ್ಟು ಜನರ ಜೀವನದೊಂದಿಗೆ ಆಟವಾಡಬೇಡಿ.

  •  ವರದಿ: ಹರೀಶ್ ಮುಲ್ಕಿ ;ನ್ಯೂಸ್ ಬ್ಯೂರೋ, ಟ್ರೂನ್ಯೂಸ್ ಕನ್ನಡ

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.