ಬಾಲಿವುಡ್ ಸೆಲೆಬ್ರಿಟಿಗಳು ತೊಡುವ ಸ್ಟೈಲಿಷ್ ಡ್ರೆಸ್ ನಿಂದಾ ಸಿಕ್ಕಾಪಟ್ಟೆ ವೈರಲ್ ..!

Jahnavi Kapoor

ಬಾಲಿವುಡ್ ಸೆಲೆಬ್ರಿಟಿಗಳು ತಾವು ತೊಡುವ ಸ್ಟೈಲಿಷ್ ಡ್ರೆಸ್ ನಿಂದಾಗಿ ಸಾಕಷ್ಟು ಸದ್ದು ಸುದ್ದಿಯನ್ನು ಮಾಡುತ್ತಾರೆ. ಅನೇಕ ಸಂದರ್ಭಗಳಲ್ಲಿ ಬಾಲಿವುಡ್ ನಟ-ನಟಿಯರು ತಾವು ತೊಡುವ ಡ್ರೆಸ್ ನಿಂದಾಗಿಯೇ ಸಿಕ್ಕಾಪಟ್ಟೆ ವೈರಲ್ ಆಗುವುದು ಮಾತ್ರವೇ ಅಲ್ಲದೇ, ಟ್ರೋಲ್ ಗೆ ಕೂಡಾ ಗುರಿಯಾಗುತ್ತಾರೆ. ಅನೇಕ ಸಂದರ್ಭಗಳಲ್ಲಿ ನಟಿಯರು ಧರಿಸುವ ವಸ್ತ್ರಗಳು ಜನರ ಗಮನವನ್ನು ಸೆಳೆಯುತ್ತದೆ. ಆಗ ಜನ ಇಬ್ಬರು ನಟಿಯರು ತೊಟ್ಟ ಡ್ರೆಸ್ ಗಳ ನಡುವೆ ಹೋಲಿಕೆ ಮಾಡಲು ಪ್ರಾರಂಭಿಸುತ್ತಾರೆ. ಯಾರು ತೊಟ್ಟ ಡ್ರೆಸ್ ಚೆನ್ನಾಗಿದೆ ಎಂದು ಕಾಮೆಂಟ್ ಗಳನ್ನು ಪಾಸ್ ಪಡುತ್ತಾರೆ. ಈಗ ಇಂತಹದೇ ಒಂದು ಹೋಲಿಕೆ ಇಬ್ಬರು ನಟಿಯರು ಧರಿಸಿದ ಡ್ರೆಸ್ ಗಳ ನಡುವೆ ನಡೆದಿದೆ.

ಬಾಲಿವುಡ್ ನ ಪ್ರಖ್ಯಾತ ನಟಿ ಜಾಹ್ನವಿ ಕಪೂರ್ ಹಾಗೂ ನಟ ಅರ್ಬಾಜ್ ಖಾನ್ ಅವರ ಗೆಳತಿ ಜಾರ್ಜಿಯಾ ಆ್ಯಂಡ್ರಿಯಾನಿ ಇಬ್ಬರೂ ಸಹಾ ತಮ್ಮ ಡ್ರೆಸ್ಸಿಂಗ್ ಸೆನ್ಸ್ ಹಾಗೂ ಸ್ಟೈಲಿಶ್ ಲಕ್ಕು ಗಳಿಂದಾಗಿ ಮಾಧ್ಯಮಗಳ ಸುದ್ದಿಗಳಲ್ಲಿ ಸ್ಥಾನವನ್ನು ಪಡೆದುಕೊಳ್ಳುತ್ತಲೇ ಇರುತ್ತಾರೆ.

ಜಾಹ್ನವಿ

ಜಾಹ್ನವಿ ಅವರ ಸ್ಟೈಲ್ ಕ್ಲಾಸಿ ಮತ್ತು ಬ್ಯಾಲೆನ್ಸಡ್ ಆಗಿರುತ್ತದೆ, ಅಂತಹ ಸ್ಟೈಲನ್ನೇ ಜಾಹ್ನವಿ ಬಹಳ ಇಷ್ಟಪಡುತ್ತಾರೆ. ಇನ್ನೊಂದು ಕಡೆ ಜಾರ್ಜಿಯಾ ಬೋಲ್ಡ್ ಲುಕ್ ಅನ್ನು ಹೆಚ್ಚು ಇಷ್ಟಪಡುತ್ತಾರೆ.‌ ಇಂತಹ ಇಬ್ಬರು ಸೆಲೆಬ್ರಿಟಿಗಳು ಒಂದೇ ವಿನ್ಯಾಸದ ಡ್ರೆಸ್ ಧರಿಸಿ ಕ್ಯಾಮೆರಾಗಳ ಕಣ್ಣಿಗೆ ಕಾಣಿಸುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಸ್ಟೈಲ್ ನ ವಿಚಾರದಲ್ಲಿ ಇಬ್ಬರಿಗೂ ಹೋಲಿಕೆ ಮಾಡಿದಾಗ ಜಾರ್ಜಿಯಾ ಹೆಚ್ಚು ಸ್ಟೈಲಿಶ್ ಆಗಿ ಕಾಣುವ ಮೂಲಕ ಜಾಹ್ನವಿ ಅವರನ್ನು ಹಿಂದಿಕ್ಕಿದ್ದಾರೆ.

ತನ್ನ ಫಿಟ್ನೆಸ್ ರೊಟೀನ್ ಗಾಗಿ ನಟಿ ಜಾಹ್ನವಿ ಕಪೂರ್ ಟು ಪೀಸ್ ನ ಎರಡು ಪ್ರತ್ಯೇಕ ವಸ್ತ್ರಗಳನ್ನು ಆಯ್ಕೆಮಾಡಿಕೊಂಡಿದ್ದಾರೆ. ಅದರಲ್ಲಿ ಅವರು ವೈಟ್ ಕ್ರಾಪ್ ಟಾಪ್ ಧರಿಸಿದ್ದು, ಅದಕ್ಕೆ ಹೊಂದಾಣಿಕೆಯಾಗುವಂತಹ ಶಾರ್ಟ್ಸ್ ಅನ್ನು ಧರಿಸಿದ್ದಾರೆ. ಜಾಹ್ನವಿ ತನಗಾಗಿ ಆರಿಸಿಕೊಂಡಿದ್ದ ಡ್ರೆಸ್ ನಲ್ಲಿ ನಟಿಯ ಫಿಟ್ ಫಿಗರ್ ಬಹಳ ಚೆನ್ನಾಗಿ ಕಂಡಿದ್ದು ಮಾತ್ರವಲ್ಲದೇ, ಅವರು ಧರಿಸಿದ್ದ ಮೈಕ್ರೋ ಲೆಂತ್ ಶಾರ್ಟ್ಸ್ ನಿಂದಾಗಿ ಅವರ ಕಾಲುಗಳ ಟೋನ್ ಕೂಡಾ ಎಲ್ಲರ ಮುಂದೆ ಕಾಣಿಸಿಕೊಂಡಿದೆ.

gh

ಇನ್ನು ಜಾರ್ಜಿಯ ವಿಷಯಕ್ಕೆ ಬರುವುದಾದರೆ, ಆಕೆ ಮನೆಯಿಂದ ಹೊರ ಬರುವಾಗ ಸರಳ ಹಾಗೂ ಆರಾಮದಾಯಕ ಎನಿಸುವ ಕ್ರೀಂ ಕಲರ್ ನ ಟಾಪ್ ಧರಿಸಿದರೆ ಅದಕ್ಕೆ ಹೊಂದಾಣಿಕೆಯಾಗುವಂತೆ ನೀಲಿಬಣ್ಣದ ಶಾರ್ಟ್ಸ್ ಧರಿಸಿದ್ದಾರೆ. ಕ್ಯಾಶುಯಲ್ ಲುಕ್ ಗಾಗಿ ಜಾರ್ಜಿಯ ಆರಿಸಿ ಕೊಂಡಂತಹ ವಸ್ತ್ರ ಆಕೆಗೆ ಸರಿಯಾಗಿ ಫಿಟ್ ಆಗಿದ್ದು ಮಾತ್ರವಲ್ಲೇ, ಬಹಳ ಆಕರ್ಷಕವಾಗಿ ಕಂಡಿತ್ತು. ಅವರು ಧರಿಸಿದ್ದ ಬಟ್ಟೆಯು ಒಂದು ರೀತಿಯಲ್ಲಿ ರಿಫ್ರೆಶ್ ವೈಬ್ಸ್ ಅನ್ನು ಸೃಷ್ಟಿಸಿದೆ ಎನ್ನುವ ಹಾಗಿತ್ತು.

ಮೈಕ್ರೊ-ಲೆಂತ್ ಧರಿಸಿರುವ ಜಾರ್ಜಿಯಾ ಅವರ ಟೋನ್ಡ್ ಕಾಲುಗಳ ಬಣ್ಣವು ಸ್ಪಷ್ಟವಾಗಿ ಕಂಡಿದೆ. ಜಾರ್ಜಿಯಾ ಸಡಿಲವಾದ ಫಿಟ್‌ಟಾಪ್‌ನಲ್ಲಿ ಮುಂಭಾಗದ ಗಂಟು ಹಾಕಿದ ಮಾದರಿಯು ಅವಳ ಟೋನ್ಡ್ ಅಬ್ಡಾಮೆನ್ ಕೂಡ ಬಹಳ ಆಕರ್ಷಕವಾಗಿ ಕಂಡಿದೆ. ಈ ಮೂಲಕ ಒಂದೇ ರೀತಿಯ ವಿನ್ಯಾಸದ ವಸ್ತ್ರ ತೊಟ್ಟಿದ್ದ ಜಾಹ್ನವಿ ಕಪೂರ್ ಮತ್ತು ಜಾರ್ಜಿಯ ಅ್ಯಂಡ್ರಿಯಾನಿ ಫೋಟೋಗಳಲ್ಲಿ ಜಾರ್ಜಿಯಾ ಜಾಹ್ನವಿಗಿಂತ ಹೆಚ್ಚು ಬೋಲ್ಡ್ ಮತ್ತು ಅಟ್ರಾಕ್ಟಿವ್ ಆಗಿ ಕಾಣುವ ಮೂಲಕ ನೆಟ್ಟಿಗರು ಹುಬ್ಬೇರಿಸುವಂತೆ ಮಾಡಿದ್ದಾರೆ.

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.