ವಿಟ್ಲ: ಅನಂತಾಡಿ ಗೋಳಿಕಟ್ಟೆಯಲ್ಲಿ ತುಂಬೆಕೋಡಿ ಗಣಿಗಾರಿಕೆಯ ವಿರುದ್ಧ ಮಾಣಿ ಮತ್ತು ಅನಂತಾಡಿ ನಾಗರಿಕ ಹಿತರಕ್ಷಣಾ ವೇದಿಕೆ ವತಿಯಿಂದ ಗಣಿಗಾರಿಕೆ ನಿಲ್ಲಿಸಿ, ಸುಳ್ಳಮಲೆ ಗುಹಾತೀರ್ಥ ಉಳಿಸಿ ಬೃಹತ್ ಪ್ರತಿಭಟನೆ ನಡೆಯಿತು.
ಮಾಜಿ ಬಿ ರಮಾನಾಥ ರೈ ಮಾತನಾಡಿ ಧರ್ಮದ ಬಗ್ಗೆ ಮಾತನಾಡುವವರು ಸುಳ್ಳಮಲೆಯಲ್ಲಿ ನಾಸ್ತಿಕರಂತೆ ವರ್ತಿಸುತ್ತಿದ್ದಾರೆ. ರಾಜಕೀಯದ ದೃಷ್ಟಿಯಿಂದ ಮಾತ್ರ ಧರ್ಮದ ವಿಚಾರ ಮಾತನಾಡುತ್ತಾರೆಂಬುದಕ್ಕೆ ಸುಳ್ಳಮಲೆ ನಿದರ್ಶನವಾಗಿದೆ. ಜಲಸನ್ನಿಧಿ ಹಾಗೂ ನಾಗಸಾನಿಧ್ಯ ಇರುವಲ್ಲಿ ಯಾವುದೇ ಸ್ಪೋಟಕಗಳನ್ನು ಬಳಸಬಾರದು. ಸಾನಿಧ್ಯ ಉಳಿಸುವ ನಿಟ್ಟಿನಲ್ಲಿ ಯಾವ ಅಷ್ಟಮಂಗಲದ ಅವಶ್ಯಕತೆಯೂ ಇಲ್ಲ ಎಂದು ಹೇಳಿದರು.

ಒಂದು ಎಕ್ರೆ ಗಣಿಗಾರಿಕೆಗೆ ಅನುಮತಿ ಪಡೆದುಕೊಂಡು ಮೂರು ಎಕ್ರೆಯಲ್ಲಿ ಕೋರೆ ನಡೆಸಲಾಗುತ್ತಿದೆ. ಗಣಿಗಾರಿಕೆಯ ಪ್ರದೇಶದಿಂದ ಗುಹಾ ತೀರ್ಥದಿಂದ 50ಮೀರಟರ್ ದೂರ ಹಾಗೂ 300ಮೀಟರ್ ದೂರದಲ್ಲಿ ಉಳ್ಳಾಲ್ತಿ ಕ್ಷೇತ್ರವಿದೆ. ಆದರೂ ಅನಂತಾಡಿ ಪಂಚಾಯಿತಿ ಗಣೆಯನ್ನು ನಿಲ್ಲಿಸುವ ಕಾರ್ಯಕ್ಕೆ ಮುಂದಾಗುತ್ತಿಲ್ಲ. ಜನರ ಮನಸ್ಸಿನಲ್ಲಿರುವ ಬೇನೆಯನ್ನು ಶಮನ ಮಾಡುವ ನಿಟ್ಟಿನಲ್ಲಿ ಈ ಆಂದೋಲನ ಹಾಕಿಕೊಳ್ಳಲಾಗಿದೆ ಎಂದು ಮಾಜಿ ಬಿ ರಮಾನಾಥ ರೈ ಹೇಳಿದರು.