ಆಕೆ ಫೋನ್‌ ಖರೀದಿಸಲು ರಸ್ತೆ ಬದಿಯಲ್ಲಿ 12 ಮಾವಿನಹಣ್ಣನ್ನು ಮಾರಿ 1.2 ಲಕ್ಷ ರೂ ಪಡೆದಿದ್ದಾಳೆ..!?

ಕೊರೊನಾ ಬಿಕ್ಕಟ್ಟಿನಿಂದ ಶಾಲೆಗಳು ಮುಚ್ಚಿವೆ. ಆನ್‌ಲೈನ್‌ ತರಗತಿಗಳು ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ಹಲವಾರು ವಿದ್ಯಾರ್ಥಿಗಳು ಸಂಪನ್ಮೂಲ ಕೊರತೆಯಿಂದ ಆನ್‌ಲೈನ್‌ ತರಗತಿಗಳಲ್ಲಿ ಭಾಗಿಯಾಗಲು ಸಾಧ್ಯವಾಗುತ್ತಿಲ್ಲ. ಇಂತದ್ದೇ ಪರಿಸ್ಥಿತಿ ಎದುರಿಸುತ್ತಿದ್ದ ಜಾರ್ಖಂಡ್‌ನ ಜಮ್ಶೆಡ್ಪುರದ 11 ವರ್ಷದ ಬಾಲಕಿಗೆ ಫೋನ್ ಖರೀದಿಸುವುದಕ್ಕಾಗಿ ಮಾವಿನ ಹಣ್ಣು ಮಾರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ನಂತರ, ಆ ಬಾಲಕಿಗೆ 1.2 ಲಕ್ಷ ರೂ ಹಣವನ್ನು ಪಡೆದಿದ್ದಾಳೆ ಎಂದು ತಿಳಿದು ಬಂದಿದೆ.

ತುಳಸಿ ಕುಮಾರಿ ಎಂಬ ಬಾಲಕಿ ಹಣಕಾಸಿನ ತೊಂದರೆಯಿಂದಾಗಿ ಆನ್‌ಲೈನ್‌ನಲ್ಲಿ ತರಗತಿಗಳಲ್ಲಿ ಭಾಗಿಯಾಗಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಆಕೆ ಫೋನ್‌ ಖರೀದಿಸಲು ರಸ್ತೆ ಬದಿಯಲ್ಲಿ ಮಾವಿನಹಣ್ಣುಗಳನ್ನು ಮಾರಾಟ ಮಾಡುತ್ತಿದ್ದರು.

ಆನ್‌ಲೈನ್‌ ತರಗತಿಯಲ್ಲಿ ನಾನು ಹಾಜರಾಗಲು ಸಾಧ್ಯವಾಗದೇ ಇದ್ದನ್ನು ನನಗೆ ತುಂಬಾ ಬೇಸರ ತರಿಸಿತ್ತು. ಹೀಗಾಗಿ ನಾನು ಮಾವಿನ ಹಣ್ಣು ಮಾರಿ ಫೋನ್‌ ಖರೀದಿಸಬೇಕು. ಅದರಿಂದ ತರಗತಿಗೆ ಭಾಗಿಯಾಗಬಹುದು ಎಂದು ನಿರ್ಧರಿಸಿದೆ. ಈ ವೇಳೆ, ಭಾನುವಾರ ಯಾರೋ ಒಬ್ಬರು ನನ್ನ ಬಳಿ ಬಂದು ವಿಡಿಯೋ ಮಾಡಿಕೊಂಡರು ಎಂದು ತುಳಸಿ ಹೇಳಿದ್ದಾರೆ.

ಅಪರಿಚಿತರಿಂದ ಸೆರೆಹಿಡಿಯಲಾದ ಈ ವಿಡಿಯೋವು ಮುಂಬೈ ಮೂಲದ ವ್ಯಾಲ್ಯೂಯಬಲ್ ಎಡುಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್‌ನ ಗಮನವನ್ನು ಸೆಳೆಯಿತು. ನಂತರ ಆ ಸಂಸ್ಥೆ ಒಂದು ಡಜನ್ ಮಾವಿನಹಣ್ಣನ್ನು 1.2 ಲಕ್ಷ ರೂ.ಗೆ ಖರೀದಿಸಲು ನಿರ್ಧರಿಸಿತು.

ಕೆಲವು ದಿನಗಳ ನಂತರ, ಯಾರೋ ಮುಂಬೈನಿಂದ ಕರೆ ಮಾಡಿ 12 ಮಾವಿನಹಣ್ಣುಗಳಿಗೆ ತಲಾ 10,000 ರೂ. ನೀಡುವುದಾಗಿ ತಿಳಿಸಿದರು ಎಂದು ತುಳಸಿ ಹೇಳಿದ್ದಾರೆ.     

“ಈಗ, ನನ್ನ ಬಳಿ ಸ್ವಂತ ಮೊಬೈಲ್ ಇದೆ. ಇದು ನನಗೆ ಸಂತೋಷವಾಗಿದೆ. ಅದರ ಮೂಲಕ ನಾನು ದೈನಂದಿನ ನನ್ನ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗುತ್ತದೆ” ಎಂದು ಆ 11 ವರ್ಷದ ಹುಡುಗಿ ಹೇಳಿದ್ದಾರೆ.

ಹಣವನ್ನು ಆಕೆಯ ತಂದೆಯ ಖಾತೆಗೆ ವರ್ಗಾಯಿಸಲಾಯಿತು ಮತ್ತು ತುಳಸಿಗೆ ಶಿಕ್ಷಕನನ್ನು ತಕ್ಷಣ ನೇಮಿಸಲಾಯಿತು. ತನ್ನ ಮಗಳಿಗೆ ಸರಿಯಾದ ಮಾರ್ಗದರ್ಶನ ದೊರೆತರೆ ಆಕೆಗಿರುವ ಉತ್ಸಾಹವು ಆಕೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತದೆ ಎಂದು ಆಕೆಯ ತಂದೆ ನಂಬಿದ್ದಾರೆ.

“ನಮ್ಮ ಸಹಾಯವು ಇಂತಹ ಬಿಕ್ಕಟ್ಟಿನ ಸಮಯಗಳಲ್ಲಿ ಮಾತ್ರವಲ್ಲ, ಆಕೆಯ ಭವಿಷ್ಯದ ಶಿಕ್ಷಣದ ಅಗತ್ಯಕ್ಕೂ ಸಹಾಯ ಮಾಡುತ್ತೇವೆ” ಎಂದು ಎಡುಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಅಮೆಯಾ ಹೆಟೆ ತಿಳಿಸಿದ್ದಾರೆ ಎಂದು ಬಾಲಕಿಯ ತಂದೆ ಹೇಳಿದ್ದಾರೆ.                                                                                           

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.