ಐಪಿಎಲ್‌ಗಿಂತ ಪಾಕಿಸ್ತಾನ ಸೂಪರ್ ಲೀಗ್ ಆಡೋದು ಚೆನ್ನಾಗಿರುತ್ತೆ - ಡೇಲ್ ಸ್ಟೇಯ್ನ್

ಬೆಂಗಳೂರು : ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ದಕ್ಷಿಣ ಆಫ್ರಿಕಾದ ಮಾರಕ ವೇಗಿ ಡೇಲ್ ಸ್ಟೇನ್ ಆಡುತ್ತಿಲ್ಲ. ಈ ಬಾರಿಯ ಆಟಗಾರರ ಹರಾಜಿನಲ್ಲೇ ಭಾಗವಹಿಸದಿರಲು ಸ್ಟೇನ್ ನಿರ್ಧರಿಸಿದ್ದರು. ತನ್ನ ಈ ನಿರ್ಧಾರಕ್ಕೆ ಕಾರಣವೇನೆಂದು ಸ್ಟೇನ್ ಈಗ ಹೇಳಿಕೊಂಡಿದ್ದಾರೆ.

1


ಡೇಲ್ ಸ್ಟೇನ್ ಪಾಕಿಸ್ತಾನದ ಪತ್ರಿಕೆಯೊಂದರ ಜೊತೆ ಮಾತನಾಡುವ ವೇಳೆ ಈ ವಿಷ್ಯ ತಿಳಿಸಿದ್ದಾರೆ. ಒಬ್ಬ ಆಟಗಾರನಾಗಿ ಐಪಿಎಲ್‌ನಲ್ಲಿ ಆಡೋದಕ್ಕಿಂತ ಪಾಕಿಸ್ತಾನ ಸೂಪರ್ ಲೀಗ್, ಶ್ರೀಲಂಕಾ ಪ್ರೀಮಿಯರ್ ಲೀಗ್‌ಗಳಲ್ಲಿ ಆಡೋದು ಚೆನ್ನಾಗಿರುತ್ತೆ ಅಂತ ಸೌತ್ ಆಫ್ರಿಕಾ ವೇಗಿ ಡೇಲ್ ಸ್ಟೇಯ್ನ್ ಹೇಳಿದ್ದಾರೆ. 

2


ಐಪಿಎಲ್‌ನಲ್ಲಿ ಪ್ಯೂರ್ ಕ್ರಿಕೆಟ್ ಬದಲು ಆಟಗಾರರು ಎಷ್ಟು ಹಣ ಪಡೀತಾರೆ ಅನ್ನೋದಕ್ಕೆ ಹೆಚ್ಚು ಮಹತ್ವ ಕೊಡಲಾಗುತ್ತೆ. ಪಾಕ್ ಅಥವಾ ಶ್ರೀಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಕ್ರಿಕೆಟ್‌ಗೆ ಹೆಚ್ಚು ಮಹತ್ವ ಕೊಡ್ತಾರೆ. ಹೀಗಾಗಿ ಐಪಿಎಲ್‌ಗಿಂತ ಬೇರೆ ಪ್ರೀಮಿಯರ್ ಲೀಗ್‌ಗಳಲ್ಲಿ ಆಡೋಕೆ ನಂಗೆ ಖುಷಿಯಾಗುತ್ತೆ ಅಂತ ಸ್ಟೇಯ್ನ್ ಹೇಳಿದ್ದಾರೆ. 

3


ಕಳೆದ ವರ್ಷ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಕಾಣಿಸಿಕೊಂಡಿದ್ದ ಸ್ಟೇಯ್ನ್ ಈ ವರ್ಷದ ಐಪಿಎಲ್‌ನಿಂದ ಹೊರಗುಳಿದಿದ್ದಾರೆ. ತಾವಾಗಿಯೇ ಐಪಿಎಲ್‌ನಿಂದ ಹೊರಗುಳಿಯೋಕೆ ಕಾರಣ ಏನು ಅನ್ನೋದನ್ನ ಈಗ ಹೇಳಿದ್ದಾರೆ. ಸದ್ಯ ಪಾಕಿಸ್ತಾನ ಪ್ರೀಮಿಯರ್ ಲೀಗ್‌ನಲ್ಲಿ ಕ್ವೆಟ್ಟಾ ಗ್ಲಾಡಿಯೇಟರ್ಸ್ ಪರವಾಗಿ ಸ್ಟೇಯ್ನ್ ಆಡ್ತಿದ್ದಾರೆ. ಡೇಲ್ ಸ್ಟೇನ್, ಐಪಿಎಲ್ ನಲ್ಲಿ ಡೆಕ್ಕನ್ ಚಾರ್ಜರ್ಸ್, ಹೈದ್ರಾಬಾದ್, ಗುಜರಾತ್, ಬೆಂಗಳೂರು ತಂಡದಲ್ಲಿ ಆಡಿದ್ದಾರೆ. 2021ರಲ್ಲಿ ಸ್ಟೇನ್ ಐಪಿಎಲ್ ನಿಂದ ಹೊರಗಿದ್ದಾರೆ. 2020ರಲ್ಲಿ ಸ್ಟೇನ್ ಆಟ ಉತ್ತಮವಾಗಿರಲಿಲ್ಲ.


ಸ್ಪೋರ್ಟ್ಸ್ ಬ್ಯೂರೋ ಟ್ರೂ ನ್ಯೂಸ್ ಕನ್ನಡ

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.