6 ಎಸೆತಗಳಲ್ಲಿ 6 ಸಿಕ್ಸರ್ ಚಚ್ಚಿ ಯುವಿ ದಾಖಲೆ ಸರಗಟ್ಟಿದ ಕೆರಿಬಿಯನ್ ಕಿಂಗ್ ಪೊಲಾರ್ಡ್

ಆಂಟಿಗುವಾ : ವೆಸ್ಟ್ ಇಂಡೀಸ್ ನಾಯಕ ಕಿರನ್ ಪೊಲಾರ್ಡ್ ಶ್ರೀಲಂಕಾ ವಿರುದ್ಧ ನಡೆದ ಮೊದಲ ಟಿ20 ಪಂದ್ಯದಲ್ಲಿ 6 ಎಸೆತಗಳಲ್ಲಿ ಆರು ಸಿಕ್ಸರ್ ಸಿಡಿಸಿ ದಾಖಲೆ ಬರೆದಿದ್ದಾರೆ.
ಆಂಟಿಗುವಾದ ಕೂಲಿಡ್ಜ್ ಕ್ರಿಕೆಟ್ ಮೈದಾನದಲ್ಲಿ ಶ್ರೀಲಂಕಾದ ವಿರುದ್ಧ ನಡೆದ ಮೊದಲ ಟಿ20 ಪಂದ್ಯದಲ್ಲಿ ಶ್ರೀಲಂಕಾದ ಅಕಿಲಾ ಧನಂಜಯ ಅವರ ಒವರ್ ನಲ್ಲಿ 6ಸಿಕ್ಸರ್ ಸಿಡಿಸುವ ಮೂಲಕ ಪೊಲಾರ್ಡ್ ಈ ಸಾಧನೆ ಮಾಡಿದ್ದಾರೆ.

1


ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಲಂಕಾ ಒಂಬತ್ತು ವಿಕೆಟ್ ನಷ್ಟಕ್ಕೆ 131 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಬಳಿಕ ಗುರಿ ಬೆನ್ನಟ್ಟಿದ ವಿಂಡೀಸ್, ಪೊಲಾರ್ಡ್ ಅಬ್ಬರದ ನೆರವಿನೊಂದಿಗೆ 13.1 ಓವರ್‌ಗಳಲ್ಲೇ ಆರು ವಿಕೆಟ್ ನಷ್ಟಕ್ಕೆ ಗುರಿ ತಲುಪಿತ್ತು.

2


ವಿಂಡೀಸ್ ಬ್ಯಾಟಿಂಗ್ ವೇಳೆ ನಾಲ್ಕನೇ ಓವರ್ ಎಸೆಯಲು ಬಂದ ಅಖಿಲ ಧನಂಜಯ ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದ್ದರು. ಲೂಯಿಸ್, ಗೇಲ್, ಪೂರನ್ ನಂತಹ ಟಿ20 ಸ್ಪೆಷಲಿಸ್ಟ್ ಗಳು ವಿಕೆಟ್ ಕಳೆದುಕೊಂಡಿದ್ದರು. ಲಂಕಾ ಗೆದ್ದೇ ಬಿಟ್ಟಿತು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿ, ಸ್ಪಿನ್ನರ್ ಅಖಿಲ ಧನಂಜಯ ಸಂತೋಷದ ಅಲೆಯಲ್ಲಿ ತೇಲುತಿದ್ದರು. ಆಗಲೇ ಕ್ರೀಡಾಂಗಣಕ್ಕೆ ಎಂಟ್ರಿಯಾಗಿದ್ದು ವಿಂಡಿಸ್ ನಾಯಕ, ಟಿ20 ದೈತ್ಯ ಕೈರನ್ ಪೊಲಾರ್ಡ್. ಧನಂಜಯರ ಮುಂದಿನ ಓವರ್ ನ ಎಲ್ಲಾ ಆರು ಎಸೆತಗಳನ್ನು ಪೊಲಾರ್ಡ್ ಮೈದಾನದ ಮೂಲೆ ಮೂಲೆಗೆ ಅಟ್ಟಿದ್ದರು!


ಅಂತರ ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ದಾಖಲೆ ಬರೆದ ವಿಶ್ವದ ಮೂರನೇ ಬ್ಯಾಟ್ಸ್ಮನ್ ಎಂಬ ಕೀರ್ತಿಗೆ ಕೀರನ್ ಪೊಲಾರ್ಡ್ ಪಾತ್ರವಾದರು. ಹಾಗೆಯೇ ಟಿ20 ಅಂತರ ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ವೆಸ್ಟ್ಇಂಡೀಸ್‌ನ ಮೊದಲ ಬ್ಯಾಟ್ಸ್ಮನ್ ಎಂದ ಹಿರಿಮೆಗೆ ಭಾಜನವಾದರು.

3


2007 ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ದಾಳಿಯಲ್ಲಿ ಯುವರಾಜ್ ಸಿಂಗ್ ಎಲ್ಲ ಆರು ಎಸೆತಗಳಲ್ಲಿ ಸಿಕ್ಸರ್ ಬಾರಿಸಿದ್ದರು. 2007ನೇ ಇಸವಿಯಲ್ಲೇ ದಕ್ಷಿಣ ಆಫ್ರಿಕಾದ ಮಾಜಿ ಹೊಡೆಬಡಿಯ ದಾಂಡಿಗ ಹರ್ಷಲ್ ಗಿಬ್ಸ್ ಏಕದಿನ ಕ್ರಿಕೆಟ್‌ನಲ್ಲಿ ಹಾಲೆಂಡ್ ವಿರುದ್ದ ಇದೇ ಸಾಧನೆ ಮಾಡಿದ್ದರು.


ಸ್ಪೋರ್ಟ್ಸ್ ಬ್ಯೂರೋ ಟ್ರೂ ನ್ಯೂಸ್ ಕನ್ನಡ

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.