5 ವರ್ಷ ವಯಸ್ಸಿನಲ್ಲೇ ಮಗುವಿಗೆ ಜನ್ಮ ..!?  ವಿಶ್ವದ ಅತ್ಯಂತ ಕಿರಿಯ ತಾಯಿ ..!

ನವದೆಹಲಿ: ಲೀನಾಗೆ ಕೇವಲ 5 ವರ್ಷ ವಯಸ್ಸಾಗಿತ್ತು, ಇದ್ದಕ್ಕಿದ್ದಂತೆ ಅವಳ ಹೊಟ್ಟೆಯ ಗಾತ್ರವು ಹೆಚ್ಚಾಗತೊಡಗಿತು. ಮೊದಲಿಗೆ ಟ್ಯೂಮರ್‌ನಿಂದ ಹೊಟ್ಟೆ ಬೆಳೆಯುತ್ತಿದೆ ಎಂದು ಪೋಷಕರು ಭಾವಿಸಿದ್ದರು. ಬಳಿಕ ಆಕೆಯನ್ನು ವೈದ್ಯರ ಬಳಿ ಕರೆದುಕೊಂಡು ಹೋದರು. ಅಲ್ಲಿಗೆ ಹೋದ ನಂತರ ವೈದ್ಯರು ಹೇಳಿದ್ದನ್ನು ಕೇಳಿ ಲೀನಾ ಪೋಷಕರು ಬೆಚ್ಚಿಬಿದ್ದರು.

 ನವದೆಹಲಿ: ಭಾರತ ಸೇರಿದಂತೆ ಪ್ರಪಂಚದಾದ್ಯಂತ ಮೇ 8 ಅನ್ನು ವಿಶ್ವ ತಾಯಂದಿರ ದಿನವನ್ನಾಗಿ ಆಚರಿಸಲಾಗುತ್ತದೆ. ಈ ತಾಯಂದಿರ ದಿನಕ್ಕೆ ನಾವು ನಿಮಗೊಂದು ಅಚ್ಚರಿಯ ವಿಷಯ ಹೇಳುತ್ತಿದ್ದೇವೆ. ಈ ತಾಯಿಯ ಬಗ್ಗೆ ಕೇಳಿದ್ರೆ ನೀವು ಹೌಹಾರುವುದು ಖಚಿತ. ಹೌದು, ಈ ತಾಯಿಯ ಬಗ್ಗೆ ಇಡೀ ಜಗತ್ತೇ ಅಚ್ಚರಿಗೊಂಡಿದೆ. ಈ ತಾಯಿ ಕೇವಲ 5 ವರ್ಷ ವಯಸ್ಸಿನಲ್ಲೇ ಮಗುವಿಗೆ ಜನ್ಮ ನೀಡಿದ್ದಾಳೆ. ಇಂದಿಗೂ ಜಗತ್ತಿನಾದ್ಯಂತ ವೈದ್ಯರಿಗೆ ಇದೊಂದು ಒಗಟಿನಂತಿದೆ. ಕೇವಲ 5 ವರ್ಷ ವಯಸ್ಸಿನಲ್ಲಿ ಮಗುವಿಗೆ ಜನ್ಮ ನೀಡುವುದು ಹೇಗೆ ಎಂದು ವೈದ್ಯರು ಇಲ್ಲಿಯವರೆಗೂ ಅರ್ಥಮಾಡಿಕೊಂಡಿಲ್ಲ.

ಕೇವಲ 5 ನೇ ವಯಸ್ಸಿನಲ್ಲಿ ತಾಯಿ

ಈ ತಾಯಿಯನ್ನು ವಿಶ್ವದ ಅತ್ಯಂತ ಕಿರಿಯ ತಾಯಿ ಎಂದು ಕರೆಯಲಾಗುತ್ತದೆ. ಈ ತಾಯಿಯ ಹೆಸರು ಲೀನಾ ಮದೀನಾ. ಲೀನಾ ಮದೀನಾ 27 ಸೆಪ್ಟೆಂಬರ್ 1933ರಂದು ಪೆರುವಿನ ಟಿಕ್ರಾಪೋದಲ್ಲಿ ಜನಿಸಿದರು. ಲೀನಾ ಕೇವಲ 5 ವರ್ಷದವಳಿದ್ದಾಗ, ಇದ್ದಕ್ಕಿದ್ದಂತೆ ಅವಳ ಹೊಟ್ಟೆಯ ಗಾತ್ರವು ಹೆಚ್ಚಾಗತೊಡಗಿತು. ಮೊದಮೊದಲು ಲೀನಾ ಅವರ ಪೋಷಕರು ಟ್ಯೂಮರ್‌ನಿಂದ ಹೊಟ್ಟೆ ಬೆಳೆಯುತ್ತಿದೆ ಎಂದು ಭಾವಿಸಿದ್ದರು. ಬಳಿಕ ಆಕೆಯನ್ನು ವೈದ್ಯರ ಬಳಿ ಕರೆದುಕೊಂಡು ಹೋದರು. ಅಲ್ಲಿಗೆ ಹೋದ ನಂತರ ವೈದ್ಯರು ಹೇಳಿದ್ದನ್ನು ಕೇಳಿ ಲೀನಾ ಪೋಷಕರು ಬೆಚ್ಚಿಬಿದ್ದರು.

truenewskaanada

 

ವೈದ್ಯರು ಲೀನಾಳನ್ನು ಪರೀಕ್ಷಿಸಿದಾಗ ಆಕೆಯ ಹೊಟ್ಟೆಯಲ್ಲಿ ಮಗು ಬೆಳೆಯುತ್ತಿರುವುದು ಕಂಡುಬಂದಿತ್ತು. ಇದನ್ನು ತಿಳಿದ ವೈದ್ಯರೂ ಒಂದುಕ್ಷಣ ಬೆಚ್ಚಿಬಿದಿದ್ದರು. ಇಷ್ಟು ಚಿಕ್ಕ ವಯಸ್ಸಿನಲ್ಲಿ ಮಗುವಿಗೆ ಜನ್ಮ ನೀಡುವುದು ಹೇಗೆ ಎಂಬುದು ವೈದ್ಯರ ಮುಂದಿದ್ದ ದೊಡ್ಡ ಸವಾಲಾಗಿತ್ತು. ಇದು ಲೀನಾಳ ಜೀವಕ್ಕೆ ಅಪಾಯಕಾರಿಯಾಗಿತ್ತು. ಹೀಗಾಗಿ ಆಕೆಯನ್ನು ಆಸ್ಪತ್ರೆಯಲ್ಲಿಯೇ ಇರಿಸಲಾಗಿತ್ತು. ಅಂತಿಮವಾಗಿ ಮೇ 14, 1939ರಂದು ಲೀನಾ ಮದೀನಾ ಕೇವಲ 5 ವರ್ಷ ವಯಸ್ಸಿನಲ್ಲಿ ಸಿಸೇರಿಯನ್ ಮೂಲಕ ಗಂಡು ಮಗುವಿಗೆ ಜನ್ಮ ನೀಡಿದರು. ಈ ಸುದ್ದಿ ಆ ಸಮಯದಲ್ಲಿ ಜಗತ್ತಿನಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಈ ವಿಷಯವನ್ನು ನಂಬುವುದು ಯಾರಿಗಾದರೂ ಕಷ್ಟವಾಗಿತ್ತು.

3 ವರ್ಷಗಳಲ್ಲಿಯೇ ಪಿರಿಯಡ್ಸ್

ಲೀನಾಗೆ ಹೆರಿಗೆಯಾದಾಗ ಆಕೆಯ ಮಗುವಿನ ತೂಕ 2.7 ಕೆಜಿ ಇತ್ತು. ವರದಿಯ ಪ್ರಕಾರ ಈ ಮಗುವನ್ನು ಲೀನಾ ಸಹೋದರನಂತೆ ಬೆಳೆಸಿದಳಂತೆ. ಲೀನಾಗೆ ಪ್ರಿಕೋಸಿಯಸ್ ಪ್ಯೂಬರ್ಟಿ ಎಂಬ ಸಮಸ್ಯೆ ಇತ್ತು ಎಂಬ ಸತ್ಯ ಬಳಿಕ ಬಹಿರಂಗವಾಯ್ತು. ಈ ಸಮಸ್ಯೆ ಎದುರಿಸುವವರಿಗೆ ಲೈಂಗಿಕ ಅಂಗಗಳು ಚಿಕ್ಕ ವಯಸ್ಸಿನಲ್ಲಿಯೇ ಬೆಳೆಯುತ್ತವೆ. ವರದಿಯ ಪ್ರಕಾರ ಲೀನಾಗೆ 3 ವರ್ಷ ವಯಸ್ಸಿನಲ್ಲೇ ಪಿರಿಯಡ್ಸ್ ಬರಲಾರಂಭಿಸಿತ್ತು.

ಆದರೆ,ಲೀನಾ ಮದೀನಾ ಇಷ್ಟು ಚಿಕ್ಕ ವಯಸ್ಸಿನಲ್ಲಿ ಗರ್ಭಿಣಿಯಾದದ್ದು ಹೇಗೆ ಎಂಬ ಪ್ರಶ್ನೆ ಕಾಡುತ್ತಲೇ ಇತ್ತು. ಲೀನಾ ವಾಸಿಸುತ್ತಿದ್ದ ಹಳ್ಳಿಯಲ್ಲಿ ಪ್ರತಿವರ್ಷ ಸಾಂಪ್ರದಾಯಿಕ ಹಬ್ಬ ಆಚರಿಸಲಾಗುತ್ತಿತ್ತು. ಈ ಹಬ್ಬದಲ್ಲಿ ಯುವಕ-ಯುವತಿಯರು ಮೈಮರೆಯುತ್ತಿದ್ದರು. ಇದಾದ ನಂತರವೂ 5ನೇ ವಯಸ್ಸಿಗೆ ತಾಯಿಯಾದ ಲೀನಾ ಜೊತೆ ಯಾರಿಗೆ ಸಂಬಂಧವಿತ್ತು ಎಂಬುದು ಅಚ್ಚರಿ ಮೂಡಿಸಿದೆ. ಈ ಘಟನೆ ಇಂದಿಗೂ ನಿಗೂಢವಾಗಿಯೇ ಉಳಿದಿದೆ.

  • ನ್ಯೂಸ್ ಬ್ಯೂರೋ  true news ಕನ್ನಡ
  • ಕೃಪೆ: zee tv

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.