2.5 ಲಕ್ಷ ನೀಡಿದ ಪ್ರಕರಣ-- ಮಂಜೇಶ್ವರ ಬಿಜೆಪಿ ಅಭ್ಯರ್ಥಿ ಸುರೇಂದ್ರನ್ ಮೇಲೆ ಕೇಸು ದಾಖಲು.

ಕಾಸರಗೋಡು: ಮಂಜೇಶ್ವರ ವಿಧಾನಸಭಾ ಚುನಾವಣೆಯಲ್ಲಿ ಈಗ ಹೊಸದೊಂದು ಆರೋಪ ಕೇಳಿಬರುತ್ತಿದೆ. ಬಿಎಸ್ಪಿಯಿಂದ ಸ್ಪರ್ಧಿಸಿದ್ದ ಸುಂದರ ಎಂಬ ಅಭ್ಯರ್ಥಿಗೆ ಸುಮಾರು ಎರಡುವರೆ ಲಕ್ಷ ರೂಪಾಯಿ ನೀಡಿದ ಆರೋಪದ ಮೇಲೆ ಕೇರಳ ಬಿಜೆಪಿಯ ಮುಖ್ಯಸ್ಥ ಸುರೇಂದ್ರನ್ ಮೇಲೆ ಕೇಸು ದಾಖಲಾಗಿದೆ.

ಈ ಆರೋಪದ ಹಿನ್ನೆಲೆಯಲ್ಲಿ ಸುರೇಂದ್ರನ್ ಮೇಲೆ ಐಪಿಸಿ ಸೆಕ್ಷನ್ ನ 179 ಬಿ ಮತ್ತು ಈ ಅಡಿಯಲ್ಲಿ ಕೇಸುವನ್ನು ಪೊಲೀಸರು ದಾಖಲೆ ಮಾಡಿಕೊಂಡಿದ್ದಾರೆ. ಸಿಪಿಐಎಂ ಅಭ್ಯರ್ಥಿ ರಮೇಶ್ ಮನ್ ನೀಡಿದ ದೂರಿನ ಅನ್ವಯ ಈ ಕೇಸು ದಾಖಲಾಗಿದೆ ಎಂದು ತಿಳಿದುಬಂದಿದೆ. ಈ ಮೊದಲು 2016ರ ಚುನಾವಣೆಯಲ್ಲಿ ಸುರೇಂದ್ರನ್ ಮಂಜೇಶ್ವರ ವಿಧಾನಸಭಾ ಚುನಾವಣೆಯಲ್ಲಿ ಕೇವಲ 89 ಮತಗಳಿಂದ ಸೋಲುಂಡಿದ್ದರು.
ಆಗ ಅಭ್ಯರ್ಥಿಯಾಗಿದ್ದ ಸುಂದರ ಅವರು 467 ಮತಗಳನ್ನು ಪಡೆದುಕೊಂಡಿದರು. ಆದರೆ ಈ ಬಾರಿ ಹಾಗಾಗದಂತೆ ಸುಂದರ ಅವರಿಗೆ ಸುರೇಂದ್ರ ನವರು ಹಣ ನೀಡಿದ್ದಾರೆ ಎಂಬುದು ಸಿಪಿಎಂ ಅಭ್ಯರ್ಥಿಯ ದೂರಾಗಿದೆ. ಈ ದೂರಿನ ಅನ್ವಯ ಈಗ ಸುರೇಂದ್ರನ್ ಮೇಲೆ ಕೇಸು ದಾಖಲಾಗಿದೆ.

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.