ಜಿಲ್ಲಾ ಸುದ್ದಿಗಳು

ರಸ್ತೆಯಲ್ಲಿ ಸಿಕ್ಕ ಚಿನ್ನದ ಬ್ರಾಸ್ ಲೈಟ್ ; ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಮಾಲಿಕರು

ಮುಲ್ಕಿ: ಬಂಗಾರ ಬೆಲೆ ಗಮನಕ್ಕೆ ಏರಿದೆ. ಇಂತಹ ಸಮಯದಲ್ಲಿ ಚಿನ್ನ ಕಳೆದುಕೊಂಡರೆ ನೋವು ದುಃಖವನ್ನು ಹೇಳುವುದಕ್ಕೆ ಸಾಧ್ಯವೇ ಹೇಳಿ. ಇಂತಹ ಘಟನೆ ಗುರುವಾರ 25ಕ್ಕೆ ಮುಲ್ಕಿಯಿಂದ ಬಪ್ಪನಾಡು ರಸ್ತೆಯಲ್ಲಿ ಕಿರಣ್ ಹಾಗೂ ಪ್ರತೀಕ್ಷ ದಂಪತಿಗಳು ಬರುವಾಗ ದಾರಿ ಮಧ್ಯ ಚಿನ್ನದ ಬ್ರಾಸ್ ಲೈಟ್‌ ಕಳೆದು ಹೋಗುತ್ತದೆ. ಈ ವಿಚಾರ ಮನೆಗೆ ತಲುಪಿದಾಗ ತಿಳಿಯುತ್ತದೆ. ಗಣೇಶ್ ಎನ್ನುವವರು  ಒಂದು ಸಂದೇಶವನ್ನು ವಾಡ್ಸಪ್ ಗ್ರೂಪ್‌ ಗೆ ಹಾಕುತ್ತಾರೆ. ಈ ಸಂದೇಶ ದಯಾನಂದ್ ಮಟ್ಟು ರವರು ನಮ್ಮ ಮುಲ್ಕಿ ವಾಡ್ಸಪ್ ಗ್ರೂಪಿಗೆ ಹಾಕುತ್ತಾರೆ. ಶುಕ್ರವಾರ ರಾತ್ರಿಯವರೆಗೆ ಯಾವುದೇ ವಿಷಯ ತಿಳಿಯದ ಬಳಿಕ ಮನೆಯ ಧರ್ಮದೈವಕ್ಕೆ ಹರಕೆ ಹೊತ್ತ ಕೆಲವು ನಿಮಿಷಗಳಲ್ಲಿ ಒಂದು ಕರೆ ಬರುತ್ತದೆ. ಅದನ್ನು ಸ್ವೀಕರಿಸಿದ ಒಬ್ಬ ಹೆಂಗಸು ಮಾತಾಡುತ್ತ ನಿಮ್ಮ ಚಿನ್ನದ ಬ್ರಾಸ್ ಲೈಟ್ ನಮ್ಮಗೆ ಸಿಕ್ಕಿದೆ ನೀವು ಬಂದು ಕೊಂಡು ಹೋಗಿ ಎಂದರು. ಇದು ದೇವರ ಮಹಿಮೆ ಎಂದು ಮಾಧ್ಯಮ ಜೊತೆಗೆ ವಿವರಿಸುತ್ತಾ ತಿಳಿಸಿದರು.

ಬಪ್ಪನಾಡು ರಾಷ್ಟ್ರೀಯ ಹೆದ್ದಾರಿಯಾಗಿ ಕೆಲಸದಿಂದ ಹಿಂದಿರುಗುವಾಗ  ಗುರುವಾರ ರಾತ್ರಿ ಹೊತ್ತಿಗೆ ರಸ್ತೆಯಲ್ಲಿ ಚಿನ್ನದ ಬ್ರಾಸ್ ಲೈಟ್ ಜಗದೀಶ್ ಶೆಟ್ಟಿಗಾರ್ ರವರಿಗೆ ಸಿಗುತ್ತದೆ. ಸಿಕ್ಕಿದ ಬ್ರಾಸ್ ಲೈಟ್ ಅನ್ನು ತಮ್ಮದೇ ಜಯಲಕ್ಷ್ಮಿ ಪ್ರೊವಿಶನ್ ಸ್ಟೋರ್ ನಲ್ಲಿ ತಮ್ಮದೇ ಕುಟುಂಬದವರಲ್ಲಿ ನೀಡುತ್ತಾರೆ. ಯಾರಾದರೂ ಕೇಳಿಕೊಂಡು ಬಂದರೆ ಕೊಡಿ ಎಂದು ಹೇಳುತ್ತಾರೆ. ಶುಕ್ರವಾರ ರಾತ್ರಿಯಾದರೂ ಚಿನ್ನದ ಬ್ರಾಸ್ ಲೈಟ್ ಕೇಳಿಕೊಂಡು ಯಾರ ಬಂದಿಲ್ಲ. ಅಂದು ರಾತ್ರಿ ಮನೆಯಲ್ಲಿ ಪಾಂಡುರಂಗ ಜಯಲಕ್ಷ್ಮಿ ಶೆಟ್ಟಿಗಾರ್ ರವರು ನಮ್ಮ ಮುಲ್ಕಿ ವಾಡ್ಸಪ್ ಗ್ರೂಪ್‌ ನೋಡಿದಾಗ ಕಳೆದುಕೊಂಡವರ ಮಾಹಿತಿ ಮತ್ತು ಅವರ ಮೊಬೈಲ್‌ ಸಂಖ್ಯೆಯನ್ನು ನೋಡಿ ತಕ್ಷಣ ಅವರ ತಂಗಿ ಸುಮನ ಜಗದೀಶ್ ಶೆಟ್ಟಿಗಾರ್ ಕರೆಮಾಡಿ ತಿಳಿಸಿದರು. ಶನಿವಾರ (ಇಂದು) ಬೆಳಗ್ಗೆ ಕಿರಣ್ ಪ್ರತೀಕ್ಷರವರು ತನ್ನ ಚಿನ್ನದ ಬ್ರಾಸ್ ಲೈಟ್ ಪಡೆದು ಕೊಂಡರು. 
ಒಟ್ಟಿನಲ್ಲಿ ದೇವರ ಶಕ್ತಿ ಹಾಗೂ ಚಿನ್ನ ಸಿಕ್ಕರು ಆಸೆ ಪಡೆಯದೇ  ಪ್ರಾಮಾಣಿಕತೆ ಮರೆದಂತಹ ಮುಲ್ಕಿ ಬಪ್ಪನಾಡಿನ ಜಯಲಕ್ಷ್ಮಿ ಪ್ರೊವಿಶನ್ ಸ್ಟೋರ್ ನ ಮಾಲೀಕರಿಗೆ ನಮ್ಮ ಮುಲ್ಕಿ, ಟ್ರೂ ನ್ಯೂಸ್ ವಾಡ್ಸಪ್ ಗ್ರೂಪ್‌ ವತಿಯಿಂದ ಅಭಿನಂದನೆಗಳು.

ಕಾಮೆಂಟ್ ಬಿಡಿ

Join Us