ಜಿಲ್ಲಾ ಸುದ್ದಿಗಳು

ಡಿ. 21ರಂದು ಕಿನ್ನಿಗೋಳಿ ಪಟ್ಟಣ ಪಂಚಾಯಿತಿಗೆ ಚುನಾವಣೆ; 24ರಂದು ಮತ ಎಣಿಕೆ

ಕಿನ್ನಿಗೋಳಿ: ರಾಜ್ಯ ಸರಕಾರ 2021 ರಲ್ಲಿ ರಚಿಸಿದ 58 ಪಟ್ಟಣ ಪಂಚಾಯತ್ ಗಳಲ್ಲಿ ಒಂದಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ತಾಲೂಕಿನ ಕಿನ್ನಿಗೋಳಿ ಪಟ್ಟಣ ಪಂಚಾಯಿತಿಗೆ ಹಾಗೂ ಮಂಗಳೂರು ತಾಲೂಕಿನ ಬಜಪೆ ಪಟ್ಟಣ ಪಂಚಾಯಿತಿಗೆ ರಾಜ್ಯ ಚುನಾವಣಾ ಆಯೋಗ ಚುನಾವಣೆ ಘೋಷಿಸಿದೆ. ಡಿ. 9ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ, ಡಿ. 10ರಂದು ನಾಮಪತ್ರ ಪರಿಶೀಲನೆ, ಡಿ. 12ರಂದು ನಾಮಪತ್ರ ಹಿಂತೆಗೆತಕ್ಕೆ ಕೊನೆಯ ದಿನ, ಡಿ. 21ರಂದು ಮತದಾನ, ಡಿ. 24ರಂದು ಮತ ಎಣಿಕೆ ನಡೆಯಲಿದೆ. 
ಕಿನ್ನಿಗೋಳಿ ಪಟ್ಟಣ ಪಂಚಾಯತ್ 2021 ಮಾರ್ಚ್ 26ರಂದು ಅಧಿಸೂಚನೆ ಗೊಂಡಿದೆ. ಕಿನ್ನಿಗೋಳಿ, ಮೆನ್ನಬೆಟ್ಟು, ಕಟೀಲು, ತಾಳಿಪಾಡಿ, ಎಳತ್ತೂರು, ಕೊಂಡೆ ಮೂಲ, ನಡುಗೋಡು, ಕಿಲೆಂಜೂರು ವ್ಯಾಪ್ತಿಯನ್ನು ಇದು ಹೊಂದಿದೆ. 

  • 18 ವಾರ್ಡ್‌ಗಳ ವಿಂಗಡಣೆ
2011ರ ಜನಗಣತಿಯ ಪ್ರಕಾರ ಪಟ್ಟಣ ಪಂಚಾಯತ್‌ನಲ್ಲಿ 16996 ಜನಸಂಖ್ಯೆ ಇದ್ದು, 8006 ಮನೆಗಳು ಇವೆ ಎಂಬ ದಾಖಲೆ ಇದೆ. ಕಿನ್ನಿಗೋಳಿ, ಕಟೀಲು , ಮೆನ್ನಬೆಟ್ಟು ಗ್ರಾಮ ಪಂಚಾಯತ್ ಒಳಗೊಂಡು ಸದ್ಯಕ್ಕೆ 18 ವಾರ್ಡ್ ವಿಗಂಡನೆ ಮಾಡಲಾಗಿದೆ. ಮೆನ್ನಬೆಟ್ಟು ಗ್ರಾಮ ಪಂಚಾಯತ್ 5, ಕಟೀಲು ಗ್ರಾಮ ಪಂಚಾಯತ್ 5, ಕಿನ್ನಿಗೋಳಿ ಗ್ರಾಮ ಪಂಚಾಯತ್‌ನಲ್ಲಿ 8 ವಾರ್ಡ್ ಮಾಡಲಾಗಿದೆ. ಕಿನ್ನಿಗೋಳಿ ಪಟ್ಟಣ ಪಂಚಾಯಿತಿಗೆ  ಡಿ. 21ರಂದು ಚುನಾವಣೆ ನಡೆಯಲಿದೆ. 
 

ಕಾಮೆಂಟ್ ಬಿಡಿ

Join Us